×
Ad

ಮಾಧ್ಯಮ ಅಕಾಡೆಮಿ ಸದಸ್ಯರಾಗಿ ಶಿವಾನಂದ ತಗಡೂರು ಸಹಿತ 11 ಮಂದಿಯ ನೇಮಕ

Update: 2024-09-26 18:34 IST

ಬೆಂಗಳೂರು : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅಧೀನದಲ್ಲಿರುವ ‘ಕರ್ನಾಟಕ ಮಾಧ್ಯಮ ಅಕಾಡೆಮಿ’ಯ ನೂತನ ಸದಸ್ಯರನ್ನಾಗಿ ಹಿರಿಯ ಪತ್ರಕರ್ತ ಶಿವಾನಂದ ತಗಡೂರು, ದಾವಣಗೆರೆಯ ಎಂ.ಇ.ಮಂಜುನಾಥ್, ವಿಜಯಪುರದ ಸಂಗಮೇಶ್ ಚೂರಿ, ಶೋಭಾ ಎಂ.ಸಿ., ಹುಬ್ಬಳ್ಳಿಯ ಜೆ.ಅಬ್ಬಾಸ್ ಮುಲ್ಲಾ ಸೇರಿದಂತೆ 11 ಮಂದಿ ನೇಮಕ ಮಾಡಿ ಅಧಿಸೂಚನೆ ಹೊರಡಿಸಲಾಗಿದೆ.

ಗುರುವಾರ ವಾರ್ತಾ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದು, ಎಚ್.ವಿ.ಕಿರಣ್, ಅನಿಲ್ ವಿ.ಗೆಜ್ಜೆ, ಕೆಂಚೇಗೌಡ, ಉಡುಪಿ ಜಿಲ್ಲೆ ಕುಂದಾಪುರದ ಯು.ಸುರೇಂದ್ರ ಶಣ್ಣೈ, ಮೈಸೂರಿನ ರವಿ ಕೋಟಿ, ಹಾಗೂ ರಶ್ಮಿ ಎಸ್.ಅವರನ್ನು ನೂತನ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಇದೇ ವೇಳೆ ಮೈಸೂರು, ಮಂಗಳೂರು, ದಾವಣಗೆರೆ ವಿವಿಯ ಸಂವಹನ ವಿಭಾಗದ ಮುಖ್ಯಸ್ಥರು ಹಾಗೂ ಆಕಾಶವಾಣಿ, ವಾರ್ತಾ ಇಲಾಖೆ ಮತ್ತು ಮಾಧ್ಯಮ ಅಕಾಡೆಮಿ ಕಾರ್ಯದರ್ಶಿಯವರು ಪದನಿಮಿತ್ತ ಸದಸ್ಯರುಗಳನ್ನಾಗಿ ನಿಯೋಜನೆ ಮಾಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News