×
Ad

ಬೆಂಗಳೂರು | ಇಬ್ಬರಿಗೆ ಕಾರು ಢಿಕ್ಕಿ : ಓರ್ವ ಬಾಲಕಿ ಮೃತ್ಯು, ಪ್ರಕರಣ ದಾಖಲು

Update: 2024-05-28 19:07 IST

ಬೆಂಗಳೂರು : ವೇಗವಾಗಿ ಬಂದ ಕಾರೊಂದು ರಸ್ತೆಯ ಪಕ್ಕದಲ್ಲಿ ನಡೆದು ಹೋಗುತ್ತಿದ್ದ ಇಬ್ಬರು ಮಕ್ಕಳಿಗೆ ಢಿಕ್ಕಿ ಹೊಡೆದು ಘಟನೆಯಲ್ಲಿ ಬಾಲಕಿಯೊಬ್ಬಳು ಮೃತಪಟ್ಟಿದ್ದು, ಈ ಸಂಬಂಧ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ವರದಿಯಾಗಿದೆ.

ಮೇ 27ರ ಸಂಜೆ ಬೆಂಗಳೂರು-ಮಾಗಡಿ ಮುಖ್ಯ ರಸ್ತೆಯ ತಾವರೆಕೆರೆ ಬಳಿ ಘಟನೆ ನಡೆದಿದ್ದು, ಬಾಲಕಿ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಮೇ 28ರಂದು ಮೃತಪಟ್ಟಿದ್ದಾಳೆ. ಗಂಭೀರ ಸ್ವರೂಪದಲ್ಲಿ ಗಾಯಗೊಂಡ ಮತ್ತೋರ್ವ ಬಾಲಕ ಗೊರಗುಂಟೆಪಾಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಬಾಲಕಿಯನ್ನು ತಾವರೆಕೆರೆಯ ನಾಗನಹಳ್ಳಿ ನಿವಾಸಿ ಪಿ.ಕುಶ್ಮಿತಾ(4) ಎಂದು ಗುರುತಿಸಲಾಗಿದೆ. ಗಾಯಗೊಂಡ ಬಾಲಕನನ್ನು ಮೃತಳ ಸೋದರ ಸಂಬಂಧಿ ವೇದಾಂತ್ ಎಂದು ತಿಳಿದುಬಂದಿದೆ.

ಘಟನೆ ಸಂಬಂಧ ಬಾಲಕಿಯ ತಂದೆ ಪ್ರಸನ್ನ(40) ಅವರು ನೀಡಿದ ದೂರಿನನ್ವಯ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಅಪಘಾತ ಎಸಗಿದವರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News