×
Ad

ಬೆಂಗಳೂರು | ಆಕಸ್ಮಿಕವಾಗಿ ತಂದೆಯ ಕಾರು ಹರಿದು ಮಗು ಮೃತ್ಯು

Update: 2024-04-23 19:15 IST

ಬೆಂಗಳೂರು: ತಂದೆಯ ಕಾರು ಆಕಸ್ಮಿಕವಾಗಿ ಹರಿದು ಮಗು ಮೃತಪಟ್ಟಿರುವ ಘಟನೆ ಇಲ್ಲಿನ ಎಚ್‍ಎಸ್‍ಆರ್ ಲೇಔಟ್‍ನಲ್ಲಿ ವರದಿಯಾಗಿದೆ.

ಎ.21ರ ರಾತ್ರಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಒಂದೂವರೆ ವರ್ಷ ವಯಸ್ಸಿನ ಶೈಜಾ ಜನ್ನತ್ ಮೃತಪಟ್ಟ ಮಗು ಎಂದು ಗುರುತಿಸಲಾಗಿದೆ.

ಸಂಬಂಧಿಕರ ಮದುವೆಗೆಂದು ಚನ್ನಪಟ್ಟಣಕ್ಕೆ ತೆರಳಿದ್ದ ಕುಟುಂಬ ರಾತ್ರಿ 11:30ರ ಸುಮಾರಿಗೆ ಮನೆಗೆ ವಾಪಸಾಗಿತ್ತು. ಕಾರಿನಿಂದ ಎಲ್ಲರೂ ಇಳಿದ ಬಳಿಕ ಬೇರೆಡೆ ಪಾರ್ಕ್ ಮಾಡಲು ಮಗುವಿನ ತಂದೆ ಮುಂದಾಗಿದ್ದರು.

ಈ ವೇಳೆ ತಮ್ಮ ಹಿಂದೆಯೇ ಓಡಿ ಬಂದು ಡೋರ್ ಬಳಿ ನಿಂತಿದ್ದ ಮಗುವನ್ನು ಗಮನಿಸದೆ ತಂದೆ ಕಾರನ್ನು ಚಲಾಯಿಸಿದ್ದರು. ಪರಿಣಾಮ ಕಾರು ಹರಿದು ಸ್ಥಳದಲ್ಲಿಯೇ ಮಗು ಸಾವನ್ನಪ್ಪಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆಯ ಕುರಿತು ಎಚ್‍ಎಸ್‍ಆರ್ ಲೇಔಟ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News