×
Ad

ಬೆಂಗಳೂರು | ಪಾನಮತ್ತ ಚಾಲಕರ ವಿರುದ್ಧ ಕ್ರಮ : ಒಂದೇ ವಾರದಲ್ಲಿ 769 ಪ್ರಕರಣ ದಾಖಲು

Update: 2024-12-23 17:08 IST

ಸಾಂದರ್ಭಿಕ ಚಿತ್ರ (PTI)

ಬೆಂಗಳೂರು : ಬೆಂಗಳೂರು ಸಂಚಾರ ಪೊಲೀಸರು ಪಾನಮತ್ತರಾಗಿ ವಾಹನ ಚಾಲನೆ ಮಾಡುವವರು ಹಾಗೂ ಅತಿವೇಗದ ಚಾಲನೆ ವಿರುದ್ಧ ಒಂದು ವಾರದಲ್ಲಿ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ 60,903 ವಾಹನ ಚಾಲಕರ ತಪಾಸಣೆ ನಡೆಸಿ 769 ಪ್ರಕರಣಗಳನ್ನು ದಾಖಲಿಸಿದ್ದಾರೆ.

ಆರೋಪಿತ ಚಾಲಕರ ಡ್ರೈವಿಂಗ್ ಲೈಸೆನ್ಸ್ ರದ್ದುಗೊಳಿಸುವಂತೆ ಸಾರಿಗೆ ಇಲಾಖೆಗೆ ಪತ್ರ ಬರೆಯಲಾಗುವುದು. ಅದೇ ರೀತಿ ನಗರದಲ್ಲಿ ಅತಿ ವೇಗವಾಗಿ ವಾಹನ ಚಲಾಯಿಸುತ್ತಿದ್ದ 241 ವಾಹನ ಸವಾರರ ವಿರುದ್ಧ ಪ್ರಕರಣ ದಾಖಲಿಸಿಕೊಂಡು 2.41 ಲಕ್ಷ ರೂ ದಂಡ ಸಂಗ್ರಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News