×
Ad

ಬೆಂಗಳೂರು | ಅತ್ಯಾಚಾರಕ್ಕೆ ಯತ್ನ ಆರೋಪ : ಬಿಜೆಪಿ ಮುಖಂಡ ಬಂಧನ

Update: 2024-12-27 20:44 IST

ಸಾಂದರ್ಭಿಕ ಚಿತ್ರ 

ಬೆಂಗಳೂರು: ಮಹಿಳೆವೊಬ್ಬರಿಗೆ ಸಾಲ ಕೊಡಿಸುವ ನೆಪ ಹೇಳಿ ಲಾಡ್ಜ್‌ಗೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿರುವ ಆರೋಪದಡಿ ಬಿಜೆಪಿ ಮುಖಂಡನೋರ್ವನನ್ನು ಇಲ್ಲಿನ ಸತನೂರು ಠಾಣಾ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಕನಕಪುರ ತಾಲೂಕಿನ ಸೂರನಹಳ್ಳಿಯ ಬಿಜೆಪಿ ಮುಖಂಡ ಚಲುವರಾಮು ಬಂಧಿತ ಆರೋಪಿ ಎಂದು ತಿಳಿದುಬಂದಿದೆ.

ತನ್ನ ಪತಿಯ ಹೆಸರಿನಲ್ಲಿದ್ದ ಕಾಗದ ಪತ್ರ ಸರಿಪಡಿಸಲು ಹಣದ ಅವಶ್ಯಕತೆ ಕಂಡು, ಮಹಿಳೆಯನ್ನು ಸಂಪರ್ಕಿಸಿದ್ದ ಬಿಜೆಪಿ ಮುಖಂಡ ಚಲುವರಾಮು ಸಾಲು ಕೊಡಿಸುವ ಭರವಸೆ ನೀಡಿದ್ದ. ಬಳಿಕ ಕಚೇರಿ ಇದೆ ಎಂದು ಲಾಡ್ಜ್‌ಗೆ ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ತಡೆಯೊಡ್ಡಿದ್ದಕ್ಕೆ ಕಪಾಳಕ್ಕೆ ಹೊಡೆದಿದ್ದಾಗಿ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಸಂಬಂಧ ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News