×
Ad

ಬೆಂಗಳೂರು | ಲಾಡ್ಜ್‌ನಲ್ಲಿ ಮಾಲ್ಡೀವ್ಸ್ ಪ್ರಜೆಯ ಮೃತದೇಹ ಪತ್ತೆ

Update: 2024-11-15 20:15 IST

ಸಾಂದರ್ಭಿಕ ಚಿತ್ರ

ಬೆಂಗಳೂರು : ನಗರದ ಲಾಡ್ಜ್‌ವೊಂದರಲ್ಲಿ ಮಾಲ್ಡೀವ್ಸ್ ದೇಶದ ಪ್ರಜೆ ಶವವಾಗಿ ಪತ್ತೆಯಾಗಿದ್ದು, ಇಲ್ಲಿನ ಆರ್.ಟಿ.ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಮೃತ ವ್ಯಕ್ತಿಯನ್ನು ಹಸನ್ ಸುಹೈಲ್ (43) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ನ.10ರಂದು ಬೆಂಗಳೂರಿಗೆ ಬಂದಿದ್ದ ಸುಹೈಲ್, ಆರ್‌ಟಿ ನಗರದ ಲಾಡ್ಜ್‌ವೊಂದರಲ್ಲಿ ವಾಸ್ತವ್ಯ ಹೂಡಿದ್ದರು. ನ.12ರಂದು ಸುಹೈಲ್ ಕೊಠಡಿಯಲ್ಲಿರುವುದನ್ನು ಸಿಬ್ಬಂದಿ ಕಂಡಿದ್ದಾರೆ. ಆನಂತರ, ಸ್ವಚ್ಛತೆಗೆ ಸಿಬ್ಬಂದಿ ಬಾಗಿಲು ತಟ್ಟಿದ್ದರೂ ತೆರೆದಿರಲಿಲ್ಲ.ಇದರಿಂದ ಅನುಮಾನಗೊಂಡ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಸ್ಥಳಕ್ಕೆ ಬಂದಪೊಲೀಸರು ಬಾಗಿಲು ಮುರಿದು ಒಳ ಹೋದಾಗ ಸುಹೈಲ್ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News