×
Ad

ಬೆಂಗಳೂರು | ಆಸ್ತಿಯಲ್ಲಿ ಪಾಲು ಕೇಳಿದ್ದಕ್ಕೆ ಮಗನ ಮೇಲೆ ಆ್ಯಸಿಡ್ ಎರಚಿದ ತಂದೆ!

Update: 2024-03-29 20:51 IST

ಬೆಂಗಳೂರು : ಆಸ್ತಿಯಲ್ಲಿ ಪಾಲು ಕೇಳಿದ್ದಕ್ಕೆ ಮಗನ ಮೇಲೆ ತಂದೆ ಕೆಮಿಕಲ್ ಮಿಶ್ರಿತ ಆ್ಯಸಿಡ್ ದಾಳಿ ಮಾಡಿರುವ ಘಟನೆ ಇಲ್ಲಿನ ಟಿ.ದಾಸರಹಳ್ಳಿಯಲ್ಲಿ ವರದಿಯಾಗಿದೆ.

ಮಾ.25ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆರೋಪಿ ತಂದೆಯನ್ನು ನಿವೃತ್ತ ಪಿಎಸ್‍ಐ ರಾಮಕೃಷ್ಣಯ್ಯ ಎಂದು ಗುರುತಿಸಲಾಗಿದ್ದು, ಆ್ಯಸಿಡ್ ದಾಳಿಗೆ ಒಳಗಾದ ಮಗ ಕಿರಣ್ ಗಂಭೀರ ಸ್ವರೂಪದಲ್ಲಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ತಂದೆಯ ಜೊತೆಗೆ ಅಣ್ಣನಾದ ಉಪೇಂದ್ರ ಕುಮಾರ್ ಮತ್ತು ಅಕ್ಕ ಕಲಾವತಿಯೂ ಸಹ ಕೃತ್ಯದಲ್ಲಿ ಭಾಗಿಯಾರುವುದಾಗಿ ಕಿರಣ್ ಆರೋಪಿಸಿದ್ದಾರೆ.

ದಾಳಿಯಿಂದ ಕಿರಣ್ ಅವರ ಒಂದು ಕಣ್ಣಿಗೆ ಮತ್ತು ದೇಹದ ಮೇಲೆ ಗಾಯಗಳಾಗಿದ್ದು, ನಾರಾಯಣ ನೇತ್ರಾಲಯದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ಹೇಳಿದ್ದಾರೆ. ಈ ಪ್ರಕರಣ ಸಂಬಂಧ ಆರೋಪಿಗಳ ಪತ್ತೆಗಾಗಿ ನಗರದ ಬಾಗಲಗುಂಟೆ ಠಾಣಾ ಪೊಲೀಸರು ಶೋಧ ನಡೆಸುತ್ತಿರುವುದಾಗಿ ಗೊತ್ತಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News