×
Ad

ಬೆಂಗಳೂರು | ಯುವತಿಯನ್ನು ಬೆದರಿಸಿ ನಗ್ನ ಫೋಟೋ ಪಡೆಯುತ್ತಿದ್ದ ಆರೋಪ : ಎಫ್‍ಐಆರ್ ದಾಖಲು

Update: 2024-04-28 20:43 IST

ಬೆಂಗಳೂರು : ಅಶ್ಲೀಲವಾಗಿ ಎಡಿಟ್ ಮಾಡಿರುವ ತಾಯಿಯ ಫೋಟೋವನ್ನು ಮಗಳಿಗೆ ಕಳುಹಿಸಿ ಬೆದರಿಕೆ ಹಾಕಿ ಆಕೆಯ ನಗ್ನ ಫೋಟೋಗಳನ್ನು ಪಡೆಯುತ್ತಿದ್ದ ಆರೋಪದಡಿ ಇಲ್ಲಿನ ಅಮೃತಹಳ್ಳಿ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

ಈ ಬಗ್ಗೆ 18 ವರ್ಷ ವಯಸ್ಸಿನ ನೊಂದ ಯುವತಿ ನೀಡಿರುವ ದೂರಿನನ್ವಯ ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.

2023ರ ಸೆಪ್ಟೆಂಬರ್ ನಲ್ಲಿ ಇನ್‍ಸ್ಟಾಗ್ರಾಂ ಖಾತೆಯೊಂದರಿಂದ ಅಶ್ಲೀಲವಾಗಿ ಎಡಿಟ್ ಮಾಡಲಾಗಿದ್ದ ನನ್ನ ತಾಯಿಯ ಫೊಟೋವನ್ನು ವಂಚಕ ಕಳುಹಿಸಿದ್ದ. ಬಳಿಕ ಬೆದರಿಕೆ ಹಾಕಿ, ನಿನ್ನ ನಗ್ನ ಫೋಟೋ ಕಳುಹಿಸದಿದ್ದರೆ ನಿನ್ನ ತಾಯಿಯ ಫೋಟೋ ವೈರಲ್ ಮಾಡುವುದಾಗಿ ಬ್ಲ್ಯಾಕ್‍ಮೇಲ್ ಮಾಡಿದ್ದ. ತಾಯಿಯ ಮರ್ಯಾದೆ ಹೋಗುತ್ತದೆ ಎಂದು ಅಂಜಿ ನನ್ನ ನಗ್ನ ಫೋಟೋಗಳನ್ನು ವಂಚಕನಿಗೆ ಕಳುಹಿಸಿದ್ದೆ. ನಂತರ ಅದೇ ಫೋಟೋವನ್ನು ಆರೋಪಿ ನನ್ನ ಸ್ನೇಹಿತರಿಗೆ, ಸೋದರ ಮಾವನಿಗೆ ಶೇರ್ ಮಾಡಿದ್ದಾನೆ. ಆರು ತಿಂಗಳುಗಳಿಂದ ಅಪರಿಚಿತ ವಂಚಕ ಕಿರುಕುಳ ನೀಡುತ್ತಿದ್ದಾನೆ ಎಂದು ಸಂತ್ರಸ್ತ ಯುವತಿ ದೂರಿನಲ್ಲಿ ಆರೋಪಿಸಿದ್ದಾರೆ.

ಪ್ರಕರಣ ಸಂಬಂಧ ಪೊಲೀಸರು ದೂರುದಾರಳ ಪರಿಚಿತರಿಂದಲೇ ಕೃತ್ಯ ನಡೆದಿರುವ ಶಂಕೆ ವ್ಯಕ್ತಪಡಿಸಿದ್ದು, ಯುವತಿಯ ಕೆಲ ಪರಿಚಿತರು, ಸ್ನೇಹಿತರ ವಿಚಾರಣೆ ಆರಂಭಿಸಿರುವುದಾಗಿ ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News