ಬೆಂಗಳೂರು | ನಾಳೆಯಿಂದ (ಫೆ.25) ಎಸೆಸೆಲ್ಸಿ ಪೂರ್ವಸಿದ್ಧತಾ ಪರೀಕ್ಷೆ
Update: 2025-02-24 22:02 IST
ಸಾಂದರ್ಭಿಕ ಚಿತ್ರ
ಬೆಂಗಳೂರು : ಫೆ.25 ರಿಂದ ಮಾ.4ರ ವರೆಗೆ ಎಸೆಸೆಲ್ಸಿ ಪೂರ್ವಸಿದ್ಧತಾ ಪರೀಕ್ಷೆಯು ನಡೆಯಲಿದ್ದು, ಫೆ.25ರಂದು ಪ್ರಥಮ ಭಾಷೆ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಇಂಗ್ಲಿಷ್ (ಎನ್‍ಸಿಇಆರ್‌ಟಿ), ಸಂಸ್ಕೃತ ಪರೀಕ್ಷೆ ನಡೆಯಲಿದೆ.
ಫೆ.27ರಂದು ಗಣಿತ, ಫೆ.28 ರಂದು ದ್ವಿತೀಯ ಭಾಷೆ ಇಂಗ್ಲಿಷ್, ಕನ್ನಡ, ಮಾ.1ರಂದು ತೃತೀಯ ಭಾಷೆ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಸಂಸ್ಕೃತ, ಕೊಂಕಣಿ ಮತ್ತು ತುಳು ಪರೀಕ್ಷೆ ನಡೆಯಲಿದೆ. ಮಾ.3ರಂದು ವಿಜ್ಞಾನ, ಮಾ.4ರಂದು ಸಮಾಜ ವಿಜ್ಞಾನ ಪರೀಕ್ಷೆ ಇರಲಿದೆ.
ಮೊದಲ 3 ಪರೀಕ್ಷೆ ಬೆಳಗ್ಗೆ 10ರಿಂದ ಮಧ್ಯಾಹ್ನ 1.15ರ ವರೆಗೆ ನಡೆಯಲಿವೆ. ಅನಂತರದ 3 ಪರೀಕ್ಷೆಗಳು ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಅಥವಾ 5.15ರ ವರೆಗೆ ನಡೆಯಲಿವೆ ಎಂದು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ತಿಳಿಸಿದೆ.