×
Ad

ಬೆಂಗಳೂರು | ʼಹಿಟ್ ಅಂಡ್ ರನ್ʼ ಪ್ರಕರಣ: ಟೋಲ್ ಕಾರ್ಮಿಕ ಮೃತ್ಯು

Update: 2024-06-01 20:23 IST

ಬೆಂಗಳೂರು: ಇಲ್ಲಿನ ನವಯುಗ ಟೋಲ್ ಬಳಿ ʼಹಿಟ್ ಅಂಡ್ ರನ್ʼ ಪ್ರಕರಣ ಬೆಳಕಿಗೆ ಬಂದಿದ್ದು, ಟೋಲ್ ಕಾರ್ಮಿಕ ಮೃತಪಟ್ಟಿದ್ದಾರೆ.

ನಾಗರಾಜು(35) ಮೃತ ಕಾರ್ಮಿಕ ಎಂದು ಗುರುತಿಸಲಾಗಿದೆ. ಕಾರ್ಮಿಕ ನಾಗರಾಜು ನವಯುಗ ಟೋಲ್‍ನಲ್ಲಿ ಆಪರೇಟರ್ ಆಗಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದು, ಶನಿವಾರ ಬೆಳಗ್ಗೆ ತುಮಕೂರು ಕಡೆಯಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಕ್ಯಾಂಟರ್ ವಾಹನ ಟೋಲ್‍ನಲ್ಲಿ ಮುಂದೆ ಚಲಿಸುತ್ತಿದ್ದ ಎರಡು ವಾಹನಗಳ ಹಿಂದೆಯೇ ತೆರಳುತ್ತಿದ್ದು, ಈ ವೇಳೆ ಕರ್ತವ್ಯದಲ್ಲಿದ್ದ ನಾಗರಾಜು, ಹಿಂದೆ ಯಾವುದೇ ವಾಹನಗಳು ಇಲ್ಲವೆಂದು ರಸ್ತೆಗೆ ಇಳಿದಾಗ ಕ್ಯಾಂಟರ್ ವಾಹನ ಕಾಲಿನ ಮೇಲೆ ಹರಿದಿದೆ ಎನ್ನಲಾಗಿದೆ.

ಗಂಭೀರವಾಗಿ ಗಾಯಗೊಂಡಿದ್ದ ಸಿಬ್ಬಂದಿಯನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಸಂಬಂಧ ನೆಲಮಂಗಲ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News