×
Ad

ಬೆಂಗಳೂರು | ತಾಯಿಯ ಕೊಲೆ ಪ್ರಕರಣ : ಪುತ್ರ ಸೇರಿ ಇಬ್ಬರ ಬಂಧನ

Update: 2024-11-12 19:58 IST

ಬೆಂಗಳೂರು : ಹಣದ ವಿಚಾರವಾಗಿ ತಾಯಿಯನ್ನೆ ಕೊಲೆಗೈದಿದ್ದ ಆರೋಪ ಪ್ರಕರಣ ಸಂಬಂಧ ಪುತ್ರ ಸೇರಿ ಇಬ್ಬರನ್ನು ಇಲ್ಲಿನ ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೊಮ್ಮನಹಳ್ಳಿ ವ್ಯಾಪ್ತಿಯ ಹೊಂಗಸಂದ್ರದ ಮನೆಯಲ್ಲಿ ಜಯಮ್ಮಾ(45) ಎಂಬಾಕೆಯನ್ನು ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿತ್ತು. ಈ ದೂರಿನ್ವಯ ಪುತ್ರ ಉಮೇಶ್ ಹಾಗೂ ಮತ್ತೋರ್ವನನ್ನು ಬಂಧಿಸಲಾಗಿದೆ.

ಜಯಮ್ಮಾ ತನ್ನ ಕಿರಿಯ ಪುತ್ರ ಗಿರೀಶ್‍ಗೆ ಹೆಚ್ಚಿನ ಆದ್ಯತೆ ನೀಡಿದಲ್ಲದೆ, ಮನೆ ಮಾರಾಟದ ಹಣ ನೀಡಿದ್ದಾರೆ ಎನ್ನುವ ವಿಚಾರ ಇಟ್ಟುಕೊಂಡು ಉಮೇಶ್ ಜಗಳ ಮಾಡಿದ್ದ ಎನ್ನಲಾಗಿದೆ.

ಶುಕ್ರವಾರ ರಾತ್ರಿ ತಾಯಿ ಒಬ್ಬರೇ ಇದ್ದಾಗ ತನ್ನ ಸ್ನೇಹಿತನೊಂದಿಗೆ ಬಂದು ಹತ್ಯೆಗೈದಿದ್ದ ಎನ್ನಲಾಗಿದೆ. ಶನಿವಾರ ಬೆಳಗ್ಗೆ ಗಿರೀಶ್‍ನ ಸ್ನೇಹಿತ ಪ್ರಭಾಕರ್ ರೆಡ್ಡಿ ಎಂಬಾತ ಮನೆಗೆ ಬಂದು ಬಾಗಿಲು ತಟ್ಟಿದರೂ ಜಯಮ್ಮಾ ಸ್ಪಂದಿಸಿರಲಿಲ್ಲ. ಬಳಿಕ ಮನೆ ಮಾಲಕರ ಸಹಾಯದಿಂದ ನಕಲಿ ಕೀ ಬಳಸಿ ಬಾಗಿಲು ತೆರೆದಾಗ ಜಯಮ್ಮ ರಕ್ತದ ಮಡುವಿನಲ್ಲಿ ಬಿದ್ದಿದ್ದರು ಎಂದು ಹೇಳಲಾಗುತ್ತಿದೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ಮೃತಳ ಹಿರಿಯ ಪುತ್ರನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಸತ್ಯಾಂಶ ಬಯಲಾಗಿದೆ. ಆರೋಪಿ ಹಾಗೂ ಆತನಿಗೆ ನೆರವು ನೀಡಿದ್ದ ಮತ್ತೋರ್ವನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News