×
Ad

ಬೆಂಗಳೂರು | ಸಂಚಾರ ನಿಯಮ ಉಲ್ಲಂಘನೆ: 1,250 ಪ್ರಕರಣ ದಾಖಲು

Update: 2025-01-31 23:14 IST

ಸಾಂದರ್ಭಿಕ ಚಿತ್ರ

ಬೆಂಗಳೂರು : ಇಲ್ಲಿನ ಪಶ್ಚಿಮ ವಿಭಾಗದ ಎಲ್ಲಾ ಸಂಚಾರ ಪೊಲೀಸ್ ಠಾಣೆಗಳ ವ್ಯಾಪ್ತಿಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಸಂಚಾರ ನಿಯಮ ಉಲ್ಲಂಘನೆ ಮಾಡಿದವರ ವಿರುದ್ದ ಒಟ್ಟು 1250 ಪ್ರಕರಣ ದಾಖಲಿಸಿ 6,54,800ರೂ. ದಂಡ ಸಂಗ್ರಹಿಸಲಾಗಿದೆ.

ನೋ ಪಾಕಿರ್ಂಗ್ ಸ್ಥಳದಲ್ಲಿ ವಾಹನ ನಿಲ್ಲಿಸಿದ್ದ ಮಾಲಕರ ಮೇಲೆ 126 ಪ್ರಕರಣ ದಾಖಲಿಸಿ 72,300 ದಂಡ, ಏಕ ಮಖ ಸಂಚಾರ ಉಲ್ಲಂಘನೆಯಲ್ಲಿ 310 ಪ್ರಕರಣ ದಾಖಲಿಸಿ, 1,54,800ರೂ ದಂಡ ಕಟ್ಟಿಸಿಕೊಳ್ಳಲಾಗಿದೆ. ಪಾದಚಾರಿ ಮಾರ್ಗ ದಲ್ಲಿ ವಾಹನ ನಿಲುಗಡೆ-23 ಪ್ರಕರಣ, 14,500ರೂ ದಂಡ, ಪಾದಚಾರಿ ಮಾರ್ಗದಲ್ಲಿ ವಾಹನ ಚಾಲನೆ -17 ಪ್ರಕರಣ 8500 ದಂಡ ,ಟ್ರಿಬಲ್ ರೈಡಿಂಗ್(ಒಂದೇ ಬೈಕ್ನಲ್ಲಿ ಮೂವರ ಸಂಚಾರ-23ಪ್ರಕರಣ-10,300ರೂ ದಂಡ,ವಾಹನ ಚಾಲನೆ ವೇಳೆ ಮೊಬಲ್ ಬಳಕೆ-26 ಪ್ರಕರಣ,37,200ರೂ ಡಂಡ ಸಂಗ್ರಹಿಸಲಾಗಿದೆ.

ಇದಲ್ಲದೆ ಇತರೆ ಸಂಚಾರ ನಿಯಮ ಉಲ್ಲಂಘನೆಯ 715 ಪ್ರಕರಣದಲ್ಲಿ 3,52,100ರೂ. ದಂಡ ವಿಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News