×
Ad

ಬೆಂಗಳೂರು | ಸಂಚಾರ ನಿಯಮ ಉಲ್ಲಂಘನೆ : ಒಂದೇ ದಿನದಲ್ಲಿ 13.78 ಲಕ್ಷ ರೂ. ದಂಡ ವಸೂಲಿ

Update: 2024-11-10 21:37 IST

ಸಾಂದರ್ಭಿಕ ಚಿತ್ರ

ಬೆಂಗಳೂರು : ಆಪ್ ಆಧರಿತ ಇ-ಟ್ಯಾಕ್ಸಿ, ಫುಡ್ ಡೆಲಿವರಿ ಮತ್ತಿತರ ಕಂಪೆನಿಗಳ ಪ್ರತಿನಿಧಿಗಳಿಂದ ಸಂಚಾರ ನಿಯಮ ಉಲ್ಲಂಘನೆಯಾಗುತ್ತಿರುವುದರ ಕುರಿತು ವಿಶೇಷ ಕಾರ್ಯಾಚರಣೆ ಕೈಗೊಂಡ ಬೆಂಗಳೂರು ಪೊಲೀಸರು 2,670 ಪ್ರಕರಣ ದಾಖಲಿಸಿಕೊಂಡು 13.78ಲಕ್ಷ ರೂ.ದಂಡ ವಸೂಲಿ ಮಾಡಿದ್ದಾರೆ.

ಶನಿವಾರ ನಗರದಾದ್ಯಂತ ಸಂಚಾರಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ವಿವಿಧ ಸಂಚಾರ ಉಲ್ಲಂಘನೆಗಳಿಗಾಗಿ ಒಟ್ಟು 13.78 ಲಕ್ಷ ದಂಡ ಸಂಗ್ರಹಿಸಲಾಗಿದೆ.

ಹೆಲ್ಮೇಟ್ ರಹಿತ ಚಾಲನೆಮಾಡಿದ 781 ಪ್ರಕರಣ ದಾಖಲಿಸಿದ್ದು, 3.90 ಲಕ್ಷ ರೂ. ದಂಡ ವಸೂಲಿಯಾಗಿದೆ. ಚಾಲನೆ ಸಮಯದಲ್ಲಿ ಮೊಬೈಲ್ ಬಳಕೆ 26 ಪ್ರಕರಣದಾಖಲಿಸಿದ್ದು, 39 ಸಾವಿರ ರೂ. ದಂಡ ವಸೂಲಿಯಾಗಿದೆ ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News