×
Ad

9.5 ಲಕ್ಷ ಲಂಚ ಸ್ವೀಕಾರ : ಕೇಂದ್ರೀಯ ವಿದ್ಯುತ್ ಸಂಶೋಧನಾ ಸಂಸ್ಥೆಯ ಜಂಟಿ ನಿರ್ದೇಶಕ ಸಹಿತ ಇಬ್ಬರ ಬಂಧನ

Update: 2026-01-10 00:32 IST

ಸಾಂದರ್ಭಿಕ ಚಿತ್ರ | PC: freepik

ಬೆಂಗಳೂರು : ಭ್ರಷ್ಟಾಚಾರದ ಪ್ರಕರಣದಲ್ಲಿ ಕೇಂದ್ರೀಯ ವಿದ್ಯುತ್ ಸಂಶೋಧನಾ ಸಂಸ್ಥೆಯ(ಸಿಪಿಆರ್‌ಐ) ಜಂಟಿ ನಿರ್ದೇಶಕ ಸಹಿತ ಇಬ್ಬರನ್ನು ಕೇಂದ್ರೀಯ ತನಿಖಾ ದಳ(ಸಿಬಿಐ)ದ ಅಧಿಕಾರಿಗಳು ಬಂಧಿಸಿರುವುದಾಗಿ ವರದಿಯಾಗಿದೆ.

ಸಿಪಿಆರ್‌ಐ ಜಂಟಿ ನಿರ್ದೇಶಕ ರಾಜಾರಾಮ್ ಮೋಹನ್‍ರಾವ್ ಚೆನ್ನು ಎಂಬುವರು 9.5 ಲಕ್ಷ ರೂ. ಲಂಚ ಸ್ವೀಕರಿಸುವ ವೇಳೆ ಸಿಬಿಐ ದಾಳಿ ನಡೆಸಿ ಬಂಧಿಸಿದ್ದು, ಲಂಚ ನೀಡುತ್ತಿದ್ದ ಸುಧೀರ್ ಗ್ರೂಪ್ ಆಫ್ ಕಂಪೆನಿಯ ನಿರ್ದೇಶಕ ಅತುಲ್ ಖನ್ನಾ ಕೂಡ ಬಂಧನಕ್ಕೊಳಗಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜಂಟಿ ನಿರ್ದೇಶಕ ರಾಜಾರಾಮ್ ನಿವಾಸದ ಮೇಲೆ ದಾಳಿ ನಡೆಸಿದ ಸಿಬಿಐ, 3.50 ಕೋಟಿ ರೂ. ನಗದು, 4 ಲಕ್ಷ ರೂ.ಗಳಿಗೂ ಅಧಿಕ ಮೌಲ್ಯದ ವಿದೇಶಿ ಕರೆನ್ಸಿಗಳನ್ನೂ ಜಪ್ತಿ ಮಾಡಿಕೊಂಡಿದೆ. ಅಮೆರಿಕನ್ ಡಾಲರ್, ಹಾಂಕಾಂಗ್ ಡಾಲರ್, ಸಿಂಗಪೂರ್ ಡಾಲರ್, ಇಂಡೋನೇಶ್ಯಾ ರುಪಯ್ಯ, ಮಲೇಷ್ಯಾ ರಿಂಗಿಟ್, ಯುರೋ ಯುವನ್, ಸ್ವೀಡಿಶ್ ಕ್ರೊನ ಮತ್ತು ಯುಎಇ ದಿರ್‍ಹಾಮ್‍ಗಳು ಪತ್ತೆಯಾಗಿವೆ.

ಸುಧೀರ್ ಗ್ರೂಪ್ ಆಫ್ ಕಂಪೆನಿಯ ಎಲೆಕ್ಟ್ರಿಕಲ್ ಉಪಕರಣಗಳ ತಪಾಸಣಾ ವರದಿ ನೀಡಲು ಜಂಟಿ ನಿರ್ದೇಶಕ ರಾಜಾರಾಮ್ ಚೆನ್ನು ಲಂಚ ಪಡೆಯುತ್ತಿದ್ದರು ಎಂದು ಅನಾಮಧೇಯ ವ್ಯಕ್ತಿ ಸಿಬಿಐಗೆ ದೂರು ನೀಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News