×
Ad

ಕರ್ನಾಟಕ ಮಾಧ್ಯಮ ಅಕಾಡಮಿ ಪ್ರಶಸ್ತಿ ಪ್ರಕಟ

Update: 2026-01-09 15:36 IST

ಬೆಂಗಳೂರು : ರಾಜ್ಯ ಮಾಧ್ಯಮ ಅಕಾಡಮಿಯು 2025ನೇ ಸಾಲಿನ ವಾರ್ಷಿಕ ಪ್ರಶಸ್ತಿ ಹಾಗೂ ವಿವಿಧ ದತ್ತಿ ಪ್ರಶಸ್ತಿಗಳನ್ನು  ಶುಕ್ರವಾರ ಪ್ರಕಟಿಸಿದೆ.

2025ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪುರಸ್ಕೃತರು : ಡಿ.ಕುಮಾರಸ್ವಾಮಿ, ಬನಶಂಕರ ಆರಾಧ್ಯ, ಹೇಮಾ ವೆಂಕಟ್, ಮಂಜುನಾಥ್ ವೈ.ಎಲ್., ಅನಂತ ನಾಡಿಗ್, ಗುರುರಾಜ್ ವಾಮನರಾವ್‌ ಜಮಖಂಡಿ, ಎಂ.ಎಂ. ಪಾಟೀಲ್, ಎಲ್.ವಿವೇಕಾನಂದ, ಆರ್.ಪಿ. ಭರತ್‌ರಾಜ್ ಸಿಂಗ್, ಪ್ರೊ.ಪೂರ್ಣಾನಂದ, ಮೊಹಮ್ಮದ್ ಅಸದ್,  ತುಂಗರೇಣುಕಾ, ಮೊಹಿಯುದ್ದೀನ್ ಪಾಷಾ, ರುದ್ರಪ್ಪ ಅಸಂಗಿ, ಸತೀಶ್ ಆಚಾರ್ಯ, ಸೋಮಶೇಖರ್ ಪಡುಕೆರೆ, ಗುಲ್ಮಾರ್ ಮಿರ್ಝಾ, ಗಣೇಶ ಹೆಗಡೆ ಇಟಗಿ, ಆರತಿ ಎಚ್‌.ಎನ್‌., ಕೆ.ಲಕ್ಷ್ಮಣ, ಉಮಾ ಅನಂತ್, ಮಂಜುನಾಥ ಮಹಾಲಿಂಗಪೂರ, ಮಂಜುನಾಥ ಟಿ., ಮಲ್ಲಿಕಾಚರಣ ವಾಡಿ, ಪ್ರತಿಮಾ ನಂದಕುಮಾರ್, ಅಮಿತ್ ಉಪಾಧ್ಯೆ, ಪ್ರಭುಸ್ವಾಮಿ ನಾಟೇಕರ್, ಸಿದ್ದೇಗೌಡ ಎನ್., ಸಂಜೀವ ಕಾಂಬ್ಳೆ, ನೀಲಕಂಠ ಕೆ.ಆರ್.

ವಿವಿಧ ದತ್ತಿ ಪ್ರಶಸ್ತಿಗಳಿಗೆ ಆಯ್ಕೆಯಾದವರು :

ಆಂದೋಲನ ದತ್ತಿ ಪ್ರಶಸ್ತಿ : ಸುವರ್ಣ ಗಿರಿ ಪತ್ರಿಕೆ, ಕೊಪ್ಪಳ

ಅಭಿಮಾನಿ ದತ್ತಿ ಪ್ರಶಸ್ತಿ : ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ “ಕಲುಷಿತ ನದಿಗಳಲ್ಲಿ ಲಕ್ಷ್ಮಣ ತೀರ್ಥ ಎರಡನೇ ಸ್ನಾನ" ವರದಿಗೆ ಹುಣಸೂರಿನ ಶಿವು ಅವರನ್ನು ಆಯ್ಕೆ ಮಾಡಲಾಗಿದೆ.

ಮೈಸೂರು ದಿಗಂತ ದತ್ತಿ ಪ್ರಶಸ್ತಿ : ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ “ಮಂಜಾದ ಕಣ್ಣುಗಳಲ್ಲಿ ಬತ್ತಿ ಹೋಗದ ಭರವಸೆʼʼ ವರದಿಗೆ ಬೆಳಗಾವಿಯ ಸಂತೋಷ ಈ. ಚಿನಗುಡಿ ಅವರನ್ನು ಆಯ್ಕೆ ಮಾಡಲಾಗಿದೆ.

ಅಭಿಮನ್ಯ ದತ್ತಿ ಪ್ರಶಸ್ತಿ : ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ “ಸಿಂಧೂಳ್ಳು ಜನರ ಜೀವನವೇ ಗೋಳು" ವರದಿಗೆ ಸಿಂಧನೂರಿನ ಚಂದ್ರಶೇಖರ ಬೆನ್ನೂರು ಅವರನ್ನು ಆಯ್ಕೆ ಮಾಡಲಾಗಿದೆ.

ಪ್ರಜಾ ಸಂದೇಶ ದತ್ತಿ ಪ್ರಶಸ್ತಿ : ಟಿವಿ 5 ಪತ್ರಿಕೆಯಲ್ಲಿ ಪ್ರಕಟವಾದ ʼʼಚಿಲಕಮುಖಿ ಗ್ರಾಮದಲ್ಲಿ ಯುವಕ ನೊಬ್ಬ ಅನ್ಯ ಜಾತಿಯುವತಿಯನ್ನು ಮದುವೆಯಾಗಿರುವ ಕಾರಣಕ್ಕೆ 8 ವರ್ಷಗಳ ಕಾಲ ಬಹಿಷ್ಕಾರ" ವರದಿಗೆ ಕೊಪ್ಪಳದ ನಾಗರಾಜು ವೈ. ಅವರನ್ನು ಆಯ್ಕೆ ಮಾಡಲಾಗಿದೆ.

ಡಾ.ಬಿ.ಆ‌ರ್.ಅಂಬೇಡ್ಕರ್ ಮೂಕನಾಯಕ ದತ್ತಿ ಪ್ರಶಸ್ತಿ : ಡಾ.ಎ.ನಾರಾಯಣ ಅವರನ್ನು ಆಯ್ಕೆ ಮಾಡಲಾಗಿದೆ.

ಅರಗಿಣಿ ದತ್ತಿ ಪ್ರಶಸ್ತಿ : ಚೇತನ್ ನಾಡಿಗೇರ, ಸಿನೆಮಾ ಪತ್ರಕರ್ತರು ಬೆಂಗಳೂರು ಅವರನ್ನು ಆಯ್ಕೆ ಮಾಡಲಾಗಿದೆ.

ಬಸವರಾಜ ದೊಡ್ಡಮನಿ ಕೃಷಿ ಪತ್ರಿಕೋದ್ಯಮ ಪ್ರಶಸ್ತಿ : ಸಿದ್ದೇಶ್ ತಾಗಟೂರು, ಬೆಂಗಳೂರು ಅವರನ್ನು ಆಯ್ಕೆ ಮಾಡಲಾಗಿದೆ.

ಸಿ.ವಿ.ರಾಜಗೋಪಾಲ್ ದತ್ತಿ ಪ್ರಶಸ್ತಿ : ಪ್ರಹ್ಲಾದ್ ಕುಳಲಿ, ಹಿರಿಯ ಪತ್ರಕರ್ತರು ಅವರನ್ನು ಆಯ್ಕೆ ಮಾಡಲಾಗಿದೆ.

ಕೆ.ಯು.ಡಬ್ಲ್ಯು.ಜೆ. ದತ್ತಿ ಪ್ರಶಸ್ತಿ : ಕೆ.ಆನಂದ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News