×
Ad

Bengaluru | ಕಾಂಪೌಂಡ್ ಗೋಡೆ ಕುಸಿದು ಆಟೋ ಚಾಲಕ ಮೃತ್ಯು

Update: 2026-05-30 20:09 IST

ಬೆಂಗಳೂರು : ರಾಜಧಾನಿ ಬೆಂಗಳೂರು ನಗರದಲ್ಲಿ ಶುಕ್ರವಾರ(ಮೇ29) ಸಂಜೆ ಸುರಿದ ಭಾರಿ ಮಳೆಯಿಂದಾಗಿ ಖಾಸಗಿ ಕ್ಲಬ್‍ನ ಕಾಂಪೌಂಡ್ ಗೋಡೆ ಕುಸಿದು ಆಟೋ ಚಾಲಕ ಮೃತಪಟ್ಟಿರುವ ಘಟನೆ ವಿಜಯನಗರದಲ್ಲಿ ವರದಿಯಾಗಿದೆ.

ಆಟೋ ಚಾಲಕನನ್ನು ಗಂಗೊಂಡನಹಳ್ಳಿಯ ನಿವಾಸಿ ಶಿವಬೋರಯ್ಯ(46) ಎಂದು ಗುರುತಿಸಲಾಗಿದೆ. ನಗರದ ಹಠಾತ್ ಮಳೆ ಬಂದಾಗ ಶಿವಬೋರಯ್ಯ ವಿಜಯನಗರದ ಕ್ಲಬ್‍ವೊಂದರ ಕಾಂಪೌಂಡ್ ಗೋಡೆಯ ಬಳಿ ತಮ್ಮ ಆಟೋರಿಕ್ಷಾವನ್ನು ನಿಲ್ಲಿಸಿಕೊಂಡಿದ್ದಾಗ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂಲತಃ ಮಂಡ್ಯ ಜಿಲ್ಲೆಯ ಶಿವಬೋರಯ್ಯ 35 ವರ್ಷಗಳಿಂದ ಅತ್ತಿಗುಪ್ಪೆಯಲ್ಲಿ ವಾಸವಾಗಿದ್ದರು ಎಂದು ತಿಳಿದುಬಂದಿದೆ. ಈ ಘಟನೆ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News