Bengaluru | ಬಸ್ ಏರಲು ಬಂದ ಪ್ರಯಾಣಿಕನಿಗೆ ಕಾಲಿನಿಂದ ಒದ್ದು ಬೀಳಿಸಿದ್ದ ಬಿಎಂಟಿಸಿ ನಿರ್ವಾಹಕ ಅಮಾನತು

Update: 2026-08-05 13:09 IST

ಬೆಂಗಳೂರು : ಬಸ್ ಏರಲು ಬಂದ ಪ್ರಯಾಣಿಕನನ್ನು ಕಾಲಿನಿಂದ ಒದ್ದು ಕೆಳಗೆ ತಳ್ಳಿದ್ದ ಆರೋಪದಡಿಯಲ್ಲಿ ಬಿಎಂಟಿಸಿ ನಿರ್ವಾಹಕನನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಆದೇಶ ಹೊರಡಿಸಿದೆ.

ನೆಲಮಂಗಲ ಟೋಲ್ ಬಳಿ ​ಆಗಸ್ಟ್ 2ರಂದು ಈ ಘಟನೆ ನಡೆದಿದೆ ಎನ್ನಲಾಗಿದ್ದು, ಬಸ್ ಏರಲು ಬಂದ ವ್ಯಕ್ತಿಗೆ ನಿರ್ವಾಹಕ ಕಾಲಿನಿಂದ ಒದ್ದು ಬೀಳಿಸುತ್ತಿರುವ ದೃಶ್ಯ ಹಿಂಬದಿಯಲ್ಲಿ ಬರುತ್ತಿದ್ದ ಬೈಕ್ ಸವಾರರೊಬ್ಬರ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ  ವ್ಯಾಪಕವಾಗಿ ವೈರಲ್ ಆಗುತ್ತಿದ್ದಂತೆ, ನಿರ್ವಾಹಕನ ಈ  ವರ್ತನೆಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ಮತ್ತು ಬೇಸರ ವ್ಯಕ್ತವಾಗಿತ್ತು.

​ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬಿಎಂಟಿಸಿ ಉನ್ನತಾಧಿಕಾರಿಗಳು, ಸಂಬಂಧಪಟ್ಟ ಬಸ್ ನಿರ್ವಾಹಕ ಕೃಷ್ಣಮೂರ್ತಿ ಅವರನ್ನು ವಿಚಾರಣಾಪೂರ್ವ ಅಮಾನತಿನಲ್ಲಿರಿಸಿ ಆದೇಶಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News