Bengaluru | ನಡುರಸ್ತೆಯಲ್ಲೇ ಔಷಧ ಅಂಗಡಿ ಮಾಲಕನ ಹತ್ಯೆ
Update: 2026-08-23 19:24 IST
ಸಾಂದರ್ಭಿಕ ಚಿತ್ರ (AI)
ಬೆಂಗಳೂರು : ನಡು ರಸ್ತೆಯಲ್ಲಿ ಮೆಡಿಕಲ್ ಸ್ಟೋರ್ ನ ಮಾಲಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸೊಹೇಲ್ ಎಂಬುವವರು ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ.
ಮಂಗಮ್ಮನ ಪಾಳ್ಯದ ನಿವಾಸಿಯಾದ ಸೊಹೇಲ್ ಮೆಡಿಕಲ್ ಹೊಂದಿದ್ದರು. ರಾತ್ರಿ 9.30ಕ್ಕೆ ಅಂಗಡಿಯನ್ನು ಮುಚ್ಚಿ, ಮಡಿವಾಳದಿಂದ ಕೋರಮಂಗಲದ ಕಡೆಗೆ ತಮ್ಮ ಬೈಕ್‍ನಲ್ಲಿ ತೆರಳುತ್ತಿದ್ದರು. ವಾಹನ ದಟ್ಟನೆಯಿಂದಾಗಿ ಬೈಕ್‍ನ್ನು ನಿಲ್ಲಿಸಿದಾಗ ಸುಮಾರು ಎರಡು ಬೈಕ್‍ನಲ್ಲಿ ಅವರನ್ನು ಹಿಂಬಾಲಿಸಿದ ಸುಮಾರು 4 ದುಷ್ಕರ್ಮಿಗಳ ತಂಡ ಏಕಾಏಕಿ ಸಾರ್ವಜನಿಕರ ಮುಂದೆಯೇ ದಾಳಿ ಮಾಡಿದ್ದಾರೆ.
ಇನ್ನು ಸ್ಥಳಕ್ಕೆ ಧಾವಿಸಿದ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಮಡಿವಾಳ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಹಂತಕರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.