ಬೆಂಗಳೂರು | ಯುವತಿ ಮೇಲೆ ಬಿಎಂಟಿಸಿ ಬಸ್ ಹತ್ತಿಸಲು ಯತ್ನಿಸಿದ ಆರೋಪ; ಚಾಲಕ ಅಮಾನತು
Photo credit: X/@3rdEyeDude
ಬೆಂಗಳೂರು: ಯುವತಿ ಮೇಲೆ ಬಿಎಂಟಿಸಿ ಬಸ್ ಹತ್ತಿಸಲು ಯತ್ನಿಸಿದ ಆರೋಪ ಎದುರಿಸುತ್ತಿರುವ ಚಾಲಕನನ್ನು ಅಮಾನತುಗೊಳಿಸಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆದೇಶ ಹೊರಡಿಸಿದ್ದಾರೆ.
ಪ್ರಶಾಂತ್ ಎಂಬಾತ ಅಮಾನತಾದ ಚಾಲಕ. ಡಿಪೋ ನಂಬರ್ 17, ಚಂದ್ರಾಲೇಔಟ್ ಡಿಪೋಗೆ ಸೇರಿದ ಬಸ್ ಇದಾಗಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಸೂಚನೆ ಮೇರೆಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಅಮಾನತುಗೊಳಿಸಿ ಆದೇಶದಲ್ಲಿ ತಿಳಿಸಿದೆ.
ಮೇ 23ರ ಸಂಜೆ 5.40ಕ್ಕೆ ನಗರದ ಕಸ್ತೂರ್ಬಾ ರಸ್ತೆಯ ಕ್ವೀನ್ಸ್ ಜಂಕ್ಷನ್ ಬಳಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬಿಎಂಟಿಸಿ ಬಸ್ ಪಕ್ಕದಲ್ಲಿ ಕಾರನ್ನು ಚಲಾಯಿಸಿಕೊಂಡು ಬರುತ್ತಿದ್ದ ಯುವತಿಗೆ ಬಸ್ ಚಾಲಕ ದಾರಿ ಬಿಡದೆ ತೊಂದರೆ ಕೊಟ್ಟಿದ್ದು ಈ ವೇಳೆ ಬಸ್ ಚಾಲಕ ಮತ್ತು ಯುವತಿ ನಡುವೆ ಗಲಾಟೆಯಾಗಿದೆ.
ಈ ಹಿನ್ನೆಲೆಯಲ್ಲಿ ಕಸ್ತೂರ್ಬಾ ರಸ್ತೆಯ ಕ್ವೀನ್ಸ್ ಜಂಕ್ಷನ್‍ನಲ್ಲಿ ಕಾರಿನಿಂದ ಇಳಿದ ಯುವತಿ ಬಿಎಂಟಿಸಿ ಬಸ್ ಅಡ್ಡಗಟ್ಟಿ ಚಾಲಕನನ್ನು ಪ್ರಶ್ನೆ ಮಾಡಿದ್ದಾರೆ. ಆದರೆ, ಚಾಲಕ ಯುವತಿಯ ಮೇಲೆ ಬಸ್ ನುಗ್ಗಿಸಲು ಮುಂದಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Full dashcam video pic.twitter.com/3KlFTiamYw
— ThirdEye (@3rdEyeDude) June 1, 2025