×
Ad

ಬೆಂಗಳೂರು: ಕುಸಿದು ಬಿದ್ದ ಹಳೇ ಕಟ್ಟಡ; ಅವಶೇಷಗಳಡಿ ಸಿಲುಕಿದ್ದ ಮೂವರ ರಕ್ಷಣೆ

Update: 2025-07-31 14:17 IST

ಬೆಂಗಳೂರು, ಜು.31: ಬೆಂಗಳೂರಿನ ಸಂಪಗಿ ರಾಮನಗರದ ಜಿಯೋ ಹೋಟೆಲ್ ಬಳಿ ಹಳೇ ಕಟ್ಟಡವೊಂದು ದಿಢೀರ್ ಕುಸಿದ್ದು, ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ.

ಸರಿ ಸುಮಾರು ಐವತ್ತು ವರ್ಷಗಳ ಕಟ್ಟಡ ಇದಾಗಿದ್ದು, ಗುರುವಾರ ಮಧ್ಯಾಹ್ನ ಸುಮಾರಿಗೆ ಏಕಾಏಕಿ ಕಟ್ಟಡ ಕುಸಿದಿದೆ. ಈ ವೇಳೆ ಸ್ಥಳೀಯರೇ ಜಮಾಯಿಸಿ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಮೂವರನ್ನು ರಕ್ಷಣೆ ಮಾಡಿದ್ದಾರೆ ಎನ್ನಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಸ್ಥಳೀಯ ನಿವಾಸಿಗಳು, ಇದು ಹಳೆಯ ಕಟ್ಟಡವಾಗಿದ್ದು, ಇತ್ತೀಚೆಗೆ ನಿರಂತರ ಮಳೆಯಿಂದ ಈ ಕಟ್ಟಡದ ಪಾಯ ದುರ್ಬಲಗೊಂಡಿದೆ. ಈ ಕಟ್ಟಡದಲ್ಲಿ ಮಾಲೀಕರೇ ವಾಸವಿದ್ದರು. ಐವರು ಮನೆಯಲ್ಲಿ ವಾಸವಾಗಿದ್ದು, ಇಬ್ಬರು ಹೊರಗಡೆ ಹೋದ ಸಂದರ್ಭದಲ್ಲಿ ಕಟ್ಟಡ ಕುಸಿದಿದೆ. ಸಂಪೂರ್ಣ ಕಟ್ಟಡ ನೆಲಕ್ಕೆ ಬಿದ್ದಿರುವುದು ಆತಂಕ ಹೆಚ್ಚಿಸಿದೆ. ಇದೀಗ ಕಟ್ಟಡದ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಸ್ಥಳಕ್ಕೆ ಸಂಪಗಿ ರಾಮನಗರ ಠಾಣಾ ಪೊಲೀಸರು ಆಗಮಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದರು. ಈ ವೇಳೆ ಕಟ್ಟಡ ಬಳಿ ತೆರಳದಂತೆ ಸ್ಥಳೀಯರಿಗೆ ಎಚ್ಚರಿಕೆ ನೀಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News