×
Ad

ಬೆಂಗಳೂರು | ಫುಟ್‌ಪಾತ್‌ನಲ್ಲಿ ಬ್ರಿಟಿಷ್ ಗಾಯಕನಿಂದ ಸಂಗೀತ ಗಾಯನ : ಪೊಲೀಸರಿಂದ ತಡೆ

Update: 2025-02-09 17:04 IST

ಬೆಂಗಳೂರು : ಖ್ಯಾತ ಬ್ರಿಟಿಷ್ ಗಾಯಕ, ಗೀತರಚನೆಕಾರ ಎಡ್ ಶೀರನ್ ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನ ಫುಟ್ ಪಾತ್‌ನಲ್ಲಿ ಸಂಗೀತ ಗಾಯನ ಮಾಡುತ್ತಿದ್ದಾಗ ಪೊಲೀಸರು ಅವರನ್ನು ತಡೆದಿದ್ದಾರೆ.

ಖ್ಯಾತ ಸಂಗೀತಗಾರ ಎಡ್ ಶೀರನ್ ಚರ್ಚ್ ಸ್ಟ್ರೀಟ್ ನಲ್ಲಿ ತನ್ನ ಪಾಪ್ ಹಿಟ್ ಹಾಡು 'ಶೇಪ್ ಆಫ್ ಯು'(‘Shape of You’) ಹಾಡುತ್ತಿದ್ದಾಗ ಓರ್ವ ಪೊಲೀಸ್ ಅಧಿಕಾರಿ ಬಂದು ಅವರ ಮೈಕ್ರೊಫೋನ್ ಸಂಪರ್ಕವನ್ನು ಧ್ವನಿ ವರ್ಧಕದಿಂದ ಕಡಿತಗೊಳಿಸಿದರು.

ಈ ಕುರಿತ 1.5 ನಿಮಿಷಗಳ ವೀಡಿಯೊ ವೈರಲ್ ಆಗಿದೆ. ವೀಡಿಯೊದಲ್ಲಿ ಎಡ್ ಶೀರನ್ ಗಿಟಾರ್ ನುಡಿಸುತ್ತಾ ಹಾಡುತ್ತಿರುವುದು ಕಂಡು ಬಂದಿದೆ. ಎಡ್ ಶೀರನ್‌ ಹಾಡನ್ನು ಕೇಳಲು ಅಲ್ಲಿ ಜನ ಜಮಾಯಿಸಿದ್ದರು.

ಈ ಕುರಿತು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಅಧಿಕಾರಿಯೋರ್ವರು ಪ್ರತಿಕ್ರಿಯಿಸಿದ್ದು, ಅವರು ಕಾರ್ಯಕ್ರಮಕ್ಕೆ ಪೂರ್ವಾನುಮತಿ ಪಡೆದಿರಲಿಲ್ಲ. ಅನುಮತಿಗಾಗಿ ಅರ್ಜಿ ಸಲ್ಲಿಸಿದ್ದಾರಾ ಅಥವಾ ಇಲ್ಲವೋ ಎಂಬುದರ ಕುರಿತು ನಮಗೆ ಯಾವುದೇ ಮಾಹಿತಿ ಇಲ್ಲ. ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪ್ರದರ್ಶನ ನೀಡುವ ಮೊದಲು ಅನುಮತಿ ಪಡೆಯಬೇಕಾಗಿದೆ. ಅವರು ಪ್ರಚಾರಕ್ಕಾಗಿ ಇದ್ದಕ್ಕಿದ್ದಂತೆ ಈ ರೀತಿ ಮಾಡಿದ್ದಾರೆ. ಇದರಿಂದ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಉದ್ಭವಿಸಬಹುದು ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News