×
Ad

ಬೆಂಗಳೂರು: ಹುಲಾ ಹೂಪಿಂಗ್‌ನಲ್ಲಿ ಪ್ರತ್ಯುಷ್ ಗಿನ್ನಿಸ್ ದಾಖಲೆ

Update: 2023-12-17 17:58 IST

ಬೆಂಗಳೂರು: ಹುಲಾ ಹೂಪಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ ನಗರದ ಪ್ರತ್ಯುಷ್‌ಗೆ ಗಿನ್ನಿಸ್ ದಾಖಲೆ ಮಾಡಿದ್ದಾರೆ.

ಇತ್ತೀಚಿಗೆ ನಡೆದ ಕ್ರೀಟಾಕೂಡವೊಂದರಲ್ಲಿ ಪ್ರತ್ಯುಷ್ ಒಂದು ನಿಮಿಷದಲ್ಲಿ 247 ಹುಲಾ ಹೂಪ್ ತಿರುಗುವಿಕೆಗಳನ್ನು ಮಾಡುವ ಮೂಲಕ ಗಿನ್ನೆೆಸ್ ವಿಶ್ವ ದಾಖಲೆ ಬರೆದಿದ್ದಾರೆ. ಪ್ರತ್ಯುಷ್ ಅವರಿ 30 ಸೆಕೆಂಡುಗಳಲ್ಲಿ ಮೊಣಕಾಲುಗಳ ಸುತ್ತ 124 ಹುಲಾ ಹೂಪ್ ತಿರುಗುವಿಕೆಗಳನ್ನು ಮಾಡಿದ್ದಾರೆ. ಹುಲಾ ಹೂಪಿಂಗ್ ನಲ್ಲಿ ಪರಿಣತಿ ಹೊಂದಿರುವ ಅವರು ಸರಣಿ ದಾಖಲೆಗಳನ್ನು ಮುರಿಯುವ ಮೂಲಕ ಹೆಗ್ಗಳಿಕೆ ಪಾತ್ರರಾಗಿದ್ದಾರೆ.

ಕರೋನಾ ಸಂದರ್ಭದಲ್ಲಿ ಆರೋಗ್ಯವನ್ನು ಅರಿತುಕೊಂಡು ಪ್ರತ್ಯುಷ್ ಹುಲಾ ಹೂಪಿಂಗ್ ಅಭ್ಯಾಸ ಮಾಡಿದರು. ಆರಂಭದಲ್ಲಿ, ಅವರು ಕೇವಲ ಅದನ್ನು ಮೋಜಿಗಾಗಿ ಮಾಡಿದರು. ಆದರೆ ಬಳಿಕ ಅದರಲ್ಲಿ ಪರಿಣತಿ ಸಾಧಿಸಿ ವಿಶ್ವ ದಾಖಲೆ ಬರೆದಿದ್ದಾರೆ.

 ಹುಲಾ ಹೂಪಿಂಗ್‌ನಲ್ಲಿ ಪರಿಣಿತಿ ಹೊಂದಲು ಸುಮಾರು ಏಳು ತಿಂಗಳು ಅಬ್ಯಾಸ ಮಾಡಿದ್ದಾರೆ.

 ಅವರ ಗಿನ್ನೆೆಸ್ ವಿಶ್ವ ದಾಖಲೆಗೆ  ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News