×
Ad

ಲೋಕಸಭೆಯಲ್ಲಿ ವಕ್ಫ್ ಮಸೂದೆ ಅಂಗೀಕಾರ ಆಗಿರುವುದು ಇತಿಹಾಸದಲ್ಲಿ ಕೆಟ್ಟ ದಿನ: ಭೋಸರಾಜು

Update: 2025-04-04 18:46 IST

ಬೆಂಗಳೂರು : ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರ ಆಗಿರುವುದು ಇತಿಹಾಸದಲ್ಲಿ ಒಂದು ಕೆಟ್ಟ ದಿನ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ, ಆರೆಸ್ಸೆಸ್ ಅವರ ಪ್ರಯತ್ನದಿಂದ ವಕ್ಫ್ ತಿದ್ದುಪಡಿ ಮಸೂದೆ ತಂದಿದ್ದಾರೆ. ದೇಶದ ಎಲ್ಲ ವಿರೋಧ ಪಕ್ಷಗಳು ಈ ವಿಧೇಯಕವನ್ನು ವಿರೋಧ ಮಾಡಿದ್ದಾರೆ. ಜಂಟಿ ಸದನ ಸಮಿತಿಗೆ ಹೋದಾಗಲು ಸಮಿತಿಯ ಸಭೆಯಲ್ಲಿ ವಿರೋಧಿಸಿದ್ದಾರೆ. ಹೀಗಿದ್ದರೂ, ವಕ್ಫ್ ತಿದ್ದುಪಡಿ ಮಸೂದೆಯನ್ನು ಅಂಗೀಕಾರ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರು ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಬೋಸರಾಜು ಖಂಡಿಸಿದರು.

ಸಂಸತ್‍ನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರ ನಡೆದಿರುವುದು ಕೆಟ್ಟ ದಿನ ಎಂದು ನಾವು ಭಾವಿಸುತ್ತೇವೆ. ಮುಂದೆ ಏನೇ ಪರಿಣಾಮ ಆದರೂ, ಅದಕ್ಕೆ ಕೇಂದ್ರ ಸರಕಾರವೇ ಜವಾಬ್ದಾರಿ ವಹಿಸಬೇಕು ಎಂದು ಬೋಸರಾಜು ಆಗ್ರಹಿಸಿದರು.

ಕರ್ನಾಟಕದಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಜಾರಿ ಬಗ್ಗೆ ನಾವು ವಿಚಾರ ಮಾಡುತ್ತೇವೆ. ಈ ಮಸೂದೆಗೆ ನಾವು ವಿರೋಧ ಮಾಡಿದ್ದೇವೆ. ಇಡೀ ದೇಶದಲ್ಲಿ ವಿಪಕ್ಷಗಳು ವಿರೋಧ ಮಾಡಿವೆ. ಮುಂದಿನ ದಿನಗಳಲ್ಲಿ ಏನಾಗುತ್ತದೆಂದು ವಿಚಾರ ಮಾಡುತ್ತೇವೆ ಎಂದು ಬೋಸರಾಜು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News