×
Ad

ಬೆಂಗಳೂರು: ಬಿಎಂಟಿಸಿ ಇಲೆಕ್ಟ್ರಿಕ್ ಬಸ್ ಹರಿದು ಯುವತಿ ಮೃತ್ಯು, ಐವರಿಗೆ ಗಾಯ

Update: 2025-07-18 20:16 IST

Photo credit: India Today

ಬೆಂಗಳೂರು: ಚಾಲಕನ ಬದಲಿಗೆ ನಿರ್ವಾಹಕನೊಬ್ಬ ಬಿಎಂಟಿಸಿ ಇಲೆಕ್ಟ್ರಿಕ್ ಬಸ್ ಚಲಾಯಿಸಿದ ಪರಿಣಾಮ ರಸ್ತೆ ಬದಿಯಲ್ಲಿ ನಿಂತಿದ್ದವರ ಮೇಲೆ ಹರಿದು ಓರ್ವ ಯುವತಿ ಮೃತಪಟ್ಟಿದ್ದು, ಮಗು ಸಹಿತ ಐವರು ಗಂಭೀರವಾಗಿ ಗಾಯಗೊಂಡಿರುವ ನಗರದ ಪೀಣ್ಯ ಎರಡನೇ ಹಂತದಲ್ಲಿ ಶುಕ್ರವಾರ ನಡೆದಿದೆ.

ಸುಮಾ(25) ಎಂಬಾಕೆ ಮೃತಪಟ್ಟ ಯುವತಿ. ಒಂದು ಮಗು ಸೇರಿದಂತೆ ಒಟ್ಟು ಐವರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಜು.18ರ ಶುಕ್ರವಾರ ಬೆಳಗ್ಗೆ ವೇಗವಾಗಿ ಬಂದ ಘಟಕ 22ರ ಕೆಎ-51 ಎಕೆ-4170 ನಂಬರ್ ನ ಬಿಎಂಟಿಸಿ ಇಲೆಕ್ಟ್ರಿಕ್ ಬಸ್ ಪೀಣ್ಯ 2ನೇ ಹಂತದಿಂದ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ತೆರಳುತ್ತಿದ್ದ ವೇಳೆ ಬ್ರೇಕ್ ಬದಲು ಎಕ್ಸಲೇಟರ್ ಒತ್ತಿದ ಪರಿಣಾಮ ರಸ್ತೆ ಬದಿಯಲ್ಲಿ ನಿಂತಿದ್ದವರ ಮೇಲೆ ಹರಿದು ನಂತರ ಕ್ಯಾಂಟೀನ್‍ಗೆ ಢಿಕ್ಕಿ ಹೊಡೆದಿದೆ.

ಚಾಲಕ ದಿಲೀಪ್ ಎಂಬಾತನ ಬದಲು ನಿರ್ವಾಹಕ ರಮೇಶ್ ಬಸ್ ಚಲಾಯಿಸಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಆರೋಪಿಸಲಾಗಿದೆ. ಇನ್ನು ಘಟನಾ ಸ್ಥಳಕ್ಕೆ ಬಿಎಂಟಿಸಿ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದುಕೊಂಡಿರುವುದಾಗಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News