ಹಿಂದೂಗಳ ಆಚರಣೆಗೆ ಸರಕಾರ ಅಡ್ಡಿ : ಬಿ.ವೈ.ವಿಜಯೇಂದ್ರ ಆರೋಪ
ಬೆಂಗಳೂರು : ರಾಜ್ಯದ ಕಾಂಗ್ರೆಸ್ ಸರಕಾರ ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುವುದರ ಜೊತೆಗೆ ಅವರ ಓಲೈಕೆಯಲ್ಲೇ ತೊಡಗಿದೆ. ಹಿಂದೂ ಕಾರ್ಯಕರ್ತರ ಆಚರಣೆಗಳಿಗೆ ಅಡ್ಡಿ ಮಾಡುವುದೇ ಇವರ ಕೆಲಸವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಆರೋಪಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಟಿ.ನರಸೀಪುರದ ಪೊಲೀಸ್ ಇನ್‌ಸ್ಪೆಕ್ಟರ್ ಗಣಪತಿ ಆಚರಣೆಯ ಹಿನ್ನೆಲೆಯಲ್ಲಿ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದ್ದಾರೆ ಎಂದರು.
ಗಣೇಶ ಚತುರ್ಥಿ ಕೇವಲ ಹಬ್ಬ ಅಲ್ಲ. ಅದು ಇಡೀ ರಾಷ್ಟ್ರದ ಜನರಲ್ಲಿ ಜಾಗೃತಿ ಮೂಡಿಸುವ ಆಚರಣೆ. ಗಣೇಶ ಹಬ್ಬ ಬಂದಾಗೆಲ್ಲ ಹಿಂದೂಗಳಿಗೆ ಈ ಸರ್ಕಾರ ತೊಂದರೆ ಮಾಡ್ತಾನೆ ಇದೆ. ಎಲ್ಲಕ್ಕೂ ಅನುಮತಿ ಪಡೆಯಬೇಕು. ಇನ್‌ಸ್ಪೆಕ್ಟರ್ ಎಚ್ಚರಿಕೆ ನೀಡಿದ್ದಾನೆಂದರೆ ಅದು ಅವರು ಮಾತನಾಡಿದಲ್ಲ. ಆಡಳಿತ ಪಕ್ಷ ಅವರ ಬಾಯಿಂದ ಮಾತನಾಡಿಸಿದೆ ಎಂದರು.
ಮುಂದಿನ ಕಾರ್ಯತಂತ್ರ ಅಧಿವೇಶನ ನಂತರ :
ಈಗಾಗಲೇ ಪಾದಯಾತ್ರೆ ಮುಗಿದಿದೆ. ಯಶಸ್ವಿಯೂ ಆಗಿದೆ. ಮುಂದಿನ ನಮ್ಮ ಹೋರಾಟ, ಕಾರ್ಯಕ್ರಮಗಳ ಬಗ್ಗೆ ಅಧಿವೇಶನ ಮುಗಿದ ನಂತರ ತೀರ್ಮಾನ ಮಾಡಲಾಗುವುದು. ಅಧಿವೇಶನದಲ್ಲಿ ಚರ್ಚೆ ಮಾಡಲು ಸಾಕಷ್ಟು ವಿಷಯಗಳಿಗೆ. ಈ ಕುರಿತು ವಿರೋಧಪಕ್ಷದ ನಾಯಕರೊಂದಿಗೆ ಚರ್ಚೆ ನಡೆಸಲಾಗುವುದು. ಈಗಾಗಲೇ ನಡೆದ ಅಧಿವೇಶನ ನಾಗೇಂದ್ರ ರಾಜೀನಾಮೆ ವಿಷಯಕ್ಕಷ್ಟೇ ಸೀಮಿತವಾಯಿತು ಎಂದರು.
15 ರಂದು ಜೆ.ಪಿ.ನಡ್ಡಾ ರಾಜ್ಯಕ್ಕೆ :
ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರು ಇದೇ 15 ರಂದು ರಾಜ್ಯಕ್ಕೆ ಬರಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕ ಜೀವನದಲ್ಲಿ 25 ವರ್ಷ ಪೂರೈಸಿದ್ದರ ಹಿನ್ನೆಲೆಯಲ್ಲಿ ದೇಶಾದ್ಯಂತ ಸೇವಾ ಸಂಕಲ್ಪ ಅಭಿಯಾನ ಮಾಡ್ತ ಇದ್ದೇವೆ. 15 ರಂದು ನಡ್ಡಾ ಮಾಧ್ಯಮಗಳೊಂದಿಗೆ ಮಾತನಾಡಲಿದ್ದಾರೆ ಎಂದರು.