×
Ad

ಪರಪ್ಪನ ಅಗ್ರಹಾರ ಕಾರಾಗೃಹದ ಮೇಲೆ ಸಿಸಿಬಿ ದಾಳಿ : ಚಾಕು, ಬ್ಲೇಡ್, ಗಾಂಜಾ ವಶ

Update: 2025-06-17 20:20 IST

ಬೆಂಗಳೂರು : ಇಲ್ಲಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಕೈದಿಗಳಿಂದ ಗಾಂಜಾ, ಬ್ಲೇಡ್, ಚಾಕು, ನಗದು ಸೇರಿ ಹಲವು ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿಸಿದ್ದಾರೆ.

ಜೂ.16ರಂದು ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಸಿಸಿಬಿ ಪೊಲೀಸರ ತಂಡ ಕಾರಾಗೃಹದಲ್ಲಿ ತೀವ್ರ ತಪಾಸಣೆ ನಡೆಸಿದ್ದು, ಕೈದಿಗಳ ಬಳಿಯಿಂದ ಅನೇಕ ಅಸಾಧಾರಣ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಸಿಸಿಬಿ ದಾಳಿ ಸಂಬಂಧ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿ, ಕೈದಿಗಳ ಬಳಿ ಹಣ, ಚಾಕು, ರಾಡ್, ಬ್ಲೇಡ್ ಮುಂತಾದ ಅಪಾಯಕರ ವಸ್ತುಗಳು ಸಿಕ್ಕಿರುವುದು ಗಂಭೀರ ವಿಷಯವಾಗಿದೆ. ಈ ಬಗ್ಗೆ ತುರ್ತಾಗಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ದಾಳಿಯಲ್ಲಿ ಸಿಕ್ಕಿದ್ದೇನು?: ಪರಪ್ಪನ ಅಗ್ರಹಾರ ಕಾರಾಗೃಹದ ದಾಳಿಯಲ್ಲಿ ಕೈದಿಗಳಿಂದ ಗಾಂಜಾ ಸೇವನೆಗೆ ಬಳಸುವ ಸಾಧನಗಳು, ತಂಬಾಕು, ಚಾಕುಗಳು, ಬ್ಲೇಡ್‍ಗಳು, ಕತ್ತರಿಗಳು, 16,180 ರೂ. ನಗದು, ಹಲವಾರು ಚೂಪಾದ ಮತ್ತು ಅಪಾಯಕಾರಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News