×
Ad

‘ನಿಮ್ಮ ಧೋರಣೆ ಬದಲಾವಣೆ ಮಾಡಿಕೊಳ್ಳಿ’ : ಸ್ಪೀಕರ್ ಖಾದರ್‌ಗೆ ಜೆಡಿಎಸ್ ಶಾಸಕ ಕಂದಕೂರ್ ಪತ್ರ

Update: 2025-08-19 23:46 IST

ಶಾಸಕ ಶರಣಗೌಡ ಕಂದಕೂರ, ಸ್ಪೀಕರ್‌ ಯು.ಟಿ.ಖಾದರ್‌

ಬೆಂಗಳೂರು, ಆ.19: ‘ಸದನದ ಕಲಾಪದಲ್ಲಿ ಶಾಸಕರಿಗೆ ಅಪಮಾನ ಮಾಡುವುದು ಸಲ್ಲ. ಹೊಸದಾಗಿ ಆಯ್ಕೆಯಾದ ಶಾಸಕರಿಗೆ ಅಗೌರವ ಉಂಟಾಗಿದೆ. ಇದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಮುಜುಗರ ಉಂಟಾಗುತ್ತಿದೆ. ಹೀಗಾಗಿ ನಿಮ್ಮ ಧೋರಣೆ ಬದಲಾವಣೆ ಮಾಡಿಕೊಳ್ಳಿ’ ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಅವರಿಗೆ, ಜೆಡಿಎಸ್ ಶಾಸಕ ಶರಣಗೌಡ ಕಂದಕೂರ್ ಪತ್ರ ಬರೆದಿದ್ದಾರೆ.

ಮಂಗಳವಾರ ಸ್ಪೀಕರ್‌ಗೆ ಪತ್ರ ಬರೆದಿರುವ ಯಾದಗಿರಿ ಜಿಲ್ಲೆ ಗುರಮಿಠ್ಕಲ್ ಕ್ಷೇತ್ರದ ಶಾಸಕ ಶರಣಗೌಡ ಕಂದಕೂರ್, ಆ.18ರಂದು ಕಲಾಪದಲ್ಲಿ ಸಂತಾಪ ಸೂಚನೆ ವೇಳೆ ಜ್ಞಾನ ದಾಸೋಹಿ ಶರಣಬಸಪ್ಪ ಅಪ್ಪರಿಗೆ ಕುರಿತು ಮಾತನಾಡುವ ಸಂದರ್ಭದಲ್ಲಿ ಸ್ಪೀಕರ್ ಆದ ತಾವು ನನಗೆ, ‘ಭಾಷಣ ಮಾಡಬೇಡಿ ನನ್ನ ಕೊಠಡಿಗೆ ಬಂದು ಭೇಟಿ ಮಾಡಿ’ ಎಂದಿರುವುದು ಪೂಜ್ಯರಿಗೆ ತಾವು ಮಾಡಿರುವ ಅಪಮಾನ’ ಎಂದು ಉಲ್ಲೇಖಿಸಿದ್ದಾರೆ.

ನೂತನ ಶಾಸಕರು ಸದನದಲ್ಲಿ ಪ್ರಶ್ನೆಗಳನ್ನು ಸರಕಾರದ ಗಮನಕ್ಕೆ ತಂದಾಗ ಹೆಚ್ಚು ಸಮಯವನ್ನು ನೀಡದೇ ಸಚಿವರ ಕೊಠಡಿಗಳಿಗೆ ಹೋಗಿ ಮಾತನಾಡಿ ಎಂದು ಹಾರಿಕೆ ಉತ್ತರ ನೀಡುವುದು, ಸಚಿವರ ಕೊಠಡಿಗೆ ಹೋಗುವುದಾದರೆ ಸದನದ ಕಲಾಪಗಳು ನಡೆಸುವುದೇಕೆ?. ಈ ರೀತಿ ಅನೇಕ ಭಾರಿ ನೂತನ ಶಾಸಕರಿಗೆ ಅಗೌರವ ಉಂಟುಮಾಡಿದಾಗ ಮುಜುಗರ ಉಂಟಾಗಿರುತ್ತದೆ ಎಂದು ಶರಣಗೌಡ ಕಂದಕೂರ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News