×
Ad

ದಾವಣಗೆರೆ | ಮಳೆಯಿಂದ ಶಾಲೆಯ ಮೇಲ್ಚಾವಣಿ ಕುಸಿತ : ತಪ್ಪಿದ ಅನಾಹುತ

Update: 2024-07-25 22:25 IST

ದಾವಣಗೆರೆ : ಶಾಲೆಯ ಮೇಲ್ಚಾವಣಿ ಕುಸಿದು ಸ್ವಲ್ಪದರಲ್ಲಿ ಮಕ್ಕಳು ಪ್ರಾಣಾಪಯದಿಂದ ಪಾರಾಗಿರುವ ಘಟನೆ ನಗರದ ಹೊರವಲಯದ ಕರೂರಿನಲ್ಲಿ ನಡೆದಿದೆ.

ದಾವಣಗೆರೆ ಜಿಲ್ಲಾಧಿಕಾರಿಗಳ ಕಚೇರಿಯ ಹತ್ತಿರದ ಕನ್ನಡ -ಉರ್ದು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ಸಂಭವಿಸಿದೆ. ಇತ್ತೀಚಿಗೆ ಸುರಿದ ಭಾರಿ ಮಳೆಗೆ ಸೋರುತ್ತಿರುವ ಹೆಂಚುಗಳ ಮಧ್ಯೆ ಇರುವ ಮರದ ತುಂಡುಗಳು ಬಹುತೇಕವಾಗಿ ಶಿಥಿಲಗೊಂಡಿದ್ದು, ಗುರುವಾರ ಮಧ್ಯಾಹ್ನ 1.30ಕ್ಕೆ ಏಕಾಏಕಿ ಛಾವಣಿ ಕುಸಿದು ಬಿದ್ದಿದೆ. ಮಕ್ಕಳು ಮಧ್ಯಾಹ್ನದ ಸಮಯದಲ್ಲಿ ಹೊರಗಿದ್ದ ಕಾರಣ ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News