ಶಾಸಕರ ವೇತನ ಹೆಚ್ಚಳ ಚರ್ಚೆ ನಿಜ : ಸಚಿವ ಎಚ್.ಕೆ.ಪಾಟೀಲ್
Update: 2025-03-11 21:31 IST
ಎಚ್.ಕೆ.ಪಾಟೀಲ್
ಬೆಂಗಳೂರು : ಶಾಸಕರ ವೇತನ ಹೆಚ್ಚಳ ವಿಚಾರದ ಕುರಿತು ಚರ್ಚೆಯಾಗಿರುವುದು ನಿಜ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.
ಮಂಗಳವಾರ ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಮಧ್ಯಪ್ರವೇಶಿಸಿ ಮಾತನಾಡಿದ ಅವರು, ಸಭಾಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆದ ಸದನಗಳ ಕಾರ್ಯಕಲಾಪಗಳ ಸಲಹಾ ಸಮಿತಿ ಸಭೆಯಲ್ಲಿ ಕೆಲವು ಶಾಸಕರು ಪ್ರಸ್ತಾಪ ಮಾಡಿದರು. ಆ ಸಭೆಯಲ್ಲಿ ವಿಧಾನಪರಿಷತ್‍ನ ಉಪಸಭಾಪತಿಗಳೂ ಇದ್ದರು. ಆ ವಿಚಾರ ಚರ್ಚೆಯಾಗಿದ್ದು ಪತ್ರಿಕೆಯಲ್ಲಿ ಬಂದಿದೆ ಎಂದು ಸ್ಪಷ್ಟನೆ ನೀಡಿದರು.
ಇದಕ್ಕೂ ಮುನ್ನ ಮಾತನಾಡಿದ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ್, ಶಾಸಕರು ಪಗಾರ (ಸಂಬಳ) ಹೆಚ್ಚಿಸಿಕೊಳ್ಳುವ ಬಗ್ಗೆ ಜನರು ಬೈಯ್ಯುತ್ತಿದ್ದಾರೆ. ಆದರೆ, ನಾನು ಹೇಳಿದ್ದು ಶಾಸಕರ ವೇತನ ಹೆಚ್ಚಳದ ಬಗ್ಗೆ ಸಮಿತಿ ರಚನೆ ಮಾಡಬೇಕೆಂದು ಎಂದು ಸ್ಪಷ್ಟನೆ ನೀಡಿದರು