ಡಿಕೆಶಿ ನಿಮ್ಮ ಕ್ಷೇತ್ರದಲ್ಲಿನ ಸಮಸ್ಯೆಗಳು ಕಣ್ಣಿಗೆ ಕಾಣಿಸುತ್ತಿಲ್ಲವೇ?: ಜೆಡಿಎಸ್ ಪ್ರಶ್ನೆ
Update: 2024-12-30 21:41 IST
ಡಿ.ಕೆ.ಶಿವಕುಮಾರ್
ಬೆಂಗಳೂರು : ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿಮ್ಮ ಕ್ಷೇತ್ರದಲ್ಲಿನ ಸಮಸ್ಯೆಗಳು ನಿಮ್ಮ ಕಣ್ಣಿಗೆ ಕಾಣಿಸುತ್ತಿಲ್ಲವೇ? ಅಥವಾ ಜಾಣಕುರುಡೇ ? ಸ್ವಾರ್ಥ ರಾಜಕಾರಣಿ ಡಿಕೆಶಿ ಮತ್ತು ಕುಟುಂಬದವರು ನಾಲ್ಕು ದಶಕಗಳಿಂದ ಅಧಿಕಾರ ಅನುಭವಿಸುತ್ತಿದ್ದಾರೆ, ಆದರೆ ಸಾತನೂರಿನ ಕುರಿಮಂದೆ ಗ್ರಾಮಸ್ಥರಿಗೆ ಮಾತ್ರ ವನವಾಸ ತಪ್ಪಿಲ್ಲ ಎಂದು ಜೆಡಿಎಸ್ ಟೀಕಿಸಿದೆ.
ಈ ಸಂಬಂಧ ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಜೆಡಿಎಸ್, ಕುರಿಮಂದೆ ಊರಿಗೆ ನೀರು, ವಿದ್ಯುತ್, ರಸ್ತೆ ಸಾರಿಗೆ ಸೇರಿದಂತೆ ಅಗತ್ಯ ಮೌಲಸೌಲಭ್ಯಗಳು ಇಂದಿಗೂ ಮರೀಚಿಕೆಯಾಗೇ ಉಳಿದಿದೆ. ಡಿಸಿಎಂ ಅವರೇ ತಮ್ಮ ಕ್ಷೇತ್ರದ ಜನರ ಸಮಸ್ಯೆಗೆ ಸ್ಪಂದಿಸಲು ಇನ್ನೆಷ್ಟು ವರ್ಷ ಬೇಕು ? ಎಂದು ಪ್ರಶ್ನಿಸಿದೆ.