×
Ad

ಉತ್ತರಪ್ರದೇಶ ಸರಕಾರ ಜನಪರವಿಲ್ಲ ಎನ್ನುವುದು ಗೊತ್ತಾಗಿದೆ : ‘ಬುಲ್ಡೋಜರ್ ಕಾರ್ಯಾಚರಣೆ’ಗೆ ಸಚಿವ ಡಾ.ಪರಮೇಶ್ವರ್

Update: 2024-11-14 21:41 IST

ಡಾ.ಜಿ.ಪರಮೇಶ್ವರ್

ಬೆಂಗಳೂರು : ಉತ್ತರ ಪ್ರದೇಶದ ಬಿಜೆಪಿ ಸರಕಾರದ ನಡೆ ಜನಪರವಾಗಿಲ್ಲ ಎಂದು ನ್ಯಾಯಾಲಯಕ್ಕೆ ಮನರಿಕೆ ಆಗಿದೆ. ಹೀಗಾಗಿಯೇ, ಬುಲ್ಡೋಜರ್ ಕಾರ್ಯಾಚರಣೆ ವಿರುದ್ಧ ತೀರ್ಪು ಬಂದಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಪ್ರದೇಶದ ಬಿಜೆಪಿ ಸರಕಾರದ ನಡೆ ಜನಪರ ಇಲ್ಲ ಎಂದು ಸುಪ್ರೀಂ ಕೋರ್ಟಿಗೆ ಮನರಿಕೆ ಆಗಿದೆ. ಹಾಗಾಗಿ ಕೋರ್ಟ್ ಉತ್ತರ ಪ್ರದೇಶ ರಾಜ್ಯದ ವಿರುದ್ಧ ತೀರ್ಪು ಕೊಟ್ಟಿದೆ ಎಂದು ನುಡಿದರು.

ಇನ್ನೂ, ಯಾರೋ ಎಷ್ಟು ಪ್ರಯತ್ನ ಮಾಡಿದರೂ ರಾಜ್ಯ ಸರಕಾರ ಅಸ್ಥಿರಗೊಳಿಸಲು ಸಾಧ್ಯವಿಲ್ಲ. ಆದರೂ, ಬಿಜೆಪಿ, ಜೆಡಿಎಸ್ನವರು ಸರಕಾರ ಅಸ್ಥಿರಗೊಳಿಸಲು ಎಲ್ಲ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ಮುಂದಿನ ದಿನಗಳಲ್ಲಿ ಜನರೇ ಉತ್ತರ ನೀಡಲಿದ್ದಾರೆ ಎಂದರು.

ಬಿಜೆಪಿಯವರ ಆಮಿಷದಿಂದ ನಮಗೆ ಯಾವುದೇ ಆತಂಕ ಇಲ್ಲ. ನಮ್ಮ ಸರಕಾರ ಸುಭದ್ರವಾಗಿದೆ. ಜನಾದೇಶ ನಮ್ಮ ಪರವಾಗಿದ್ದರೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರೀತಿ ಮಾಡುವುದು ಸರಿಯಲ್ಲ ಎಂದ ಅವರು, ಜನ ಎಲ್ಲವನ್ನೂ ಗಮನಿಸಿ ತೀರ್ಮಾನಿಸುತ್ತಾರೆ. ಅಷ್ಟು ಸುಲಭವಾಗಿ ಜನ ಒಪ್ಪಿಕೊಳ್ಳಲ್ಲ, ಅವರನ್ನು ತಿರಸ್ಕರಿಸುತ್ತಾರೆ ಎಂದು ಹೇಳಿದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News