×
Ad

ರಾಜಕಾರಣಿಯಾದರೂ ಉದ್ಯಮವೇ ನನ್ನ ಫ್ಯಾಷನ್ : ಸಂತೋಷ್‌ ಲಾಡ್

Update: 2025-02-13 20:09 IST

Photo: X/@SantoshSLadINC

ಬೆಂಗಳೂರು : ‘ಹದಿನೇಳು ವರ್ಷದವನಾಗಿದ್ದಾಗಿನಿಂದ ರಾಜಕೀಯದಲ್ಲಿದ್ದೇನೆ. ನಾಲ್ಕು ಬಾರಿ ಶಾಸಕ, ಎರಡು ಬಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ. ಎರಡು ಬಾರಿ ಕಾರ್ಮಿಕ ಸಚಿವನಾಗಿದ್ದೇನೆ. ರಾಜಕಾರಣಿಯಾದರೂ ಉದ್ಯಮವೇ ನನ್ನ ಫ್ಯಾಷನ್’ ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್ ತಿಳಿಸಿದರು.

ಗುರುವಾರ ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಲವು ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದರೆ ಒಳ್ಳೆಯದು. ಉದ್ಯಮ ಕುಟುಂಬದಿಂದ ಬಂದವನು ನಾನು. ಬಳ್ಳಾರಿಯಲ್ಲಿ ನಮ್ಮ ಅಜ್ಜ ಗಣಿಗಾರಿಕೆಯನ್ನು ಆರಂಭಿಸಿದ್ದರು. ಇದರಿಂದ ಸಾಕಷ್ಟು ಉದ್ಯೋಗಾವಕಾಶಗಳು ಸೃಷ್ಟಿಯಾಗಿದ್ದವು ಎಂದರು.

ಈ ವೇಳೆ ಹೂಡಿಕೆದಾರರು ಮತ್ತು ಉದ್ಯಮಿಗಳೊಂದಿಗೆ ವಿವಿಧ ವಿಷಯಗಳ ಕುರಿತು ಮಾತುಕತೆ ನಡೆಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News