×
Ad

ನವಗ್ರಹ ಸಿನಿಮಾದಲ್ಲಿ ನಟಿಸಿದ್ದ ಗಿರಿ ದಿನೇಶ್​ ನಿಧನ

Update: 2025-02-08 15:58 IST

ಗಿರಿ ದಿನೇಶ್ (45)

ಬೆಂಗಳೂರು : ದರ್ಶನ್​ ಅಭಿನಯದ ನವಗ್ರಹ ಸಿನಿಮಾ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದ ಗಿರಿ ದಿನೇಶ್ (45) ಹೃದಯಾಘಾತದಿಂದ ನಿಧನರಾಗಿದ್ದಾರೆ.

ಗಿರಿ ದಿನೇಶ್​ ನವಗ್ರಹ ಸಿನಿಮಾದ ಮೂಲಕ ಖ್ಯಾತಿಯನ್ನು ಗಳಿಸಿದ್ದರು. ಶುಕ್ರವಾರ ಸಂಜೆ ಮನೆಯಲ್ಲಿ ಪೂಜೆ ಮಾಡುವ ವೇಳೆ ಗಿರಿ ದಿನೇಶ್​ ಅವರು ಹೃದಯಾಘಾತದಿಂದ ಕುಸಿದು ಬಿದ್ದಿದ್ದರು. ತಕ್ಷಣ ಗಿರಿ ದಿನೇಶ್​ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆಯೇ ನಿಧನರಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News