×
Ad

ಜಿ.ಟಿ.ದೇವೇಗೌಡ ಮೈಸೂರಿನವರು, ತೊಂದರೆಗೆ ಸಿಲುಕಿ ಹಾಕಿಕೊಳ್ಳಬಾರದು ಎಂಬ ಕಾರಣಕ್ಕೆ ಸಿದ್ದರಾಮಯ್ಯ ಪರ ಮಾತನಾಡಿರಬೇಕು: ಕುಮಾರಸ್ವಾಮಿ ತಿರುಗೇಟು

Update: 2024-10-03 14:21 IST

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (X/@hd_kumaraswamy)

ಬೆಂಗಳೂರು, ಅ.3: ಜಿ.ಟಿ.ದೇವೇಗೌಡ ಮೈಸೂರಿನವರು. ತಾನು ತೊಂದರೆಗೆ ಸಿಲುಕಿ ಹಾಕಿಕೊಳ್ಳಬಾರದು ಎಂಬ ಕಾರಣಕ್ಕೆ ಸಿದ್ದರಾಮಯ್ಯರ ಪರವಾಗಿ ಮಾತನಾಡಿರಬೇಕು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಮಾಧ್ಯಮದವರ ಜೊತೆ ಮಾತನಾಡಿದ ಅವರು, ಎಫ್ ಐಆರ್ ಆಗಿರುವ ಕಾರಣಕ್ಕೆ ನಾನು ಮುಖ್ಯಮಂತ್ರಿ ಸಿದ್ದರಾಮಯ್ಯರ ರಾಜೀನಾಮೆ ಕೇಳಿಲ್ಲ, ಈಗ ಅವರು ನಡೆದುಕೊಳ್ತಾ ಇರುವ ರೀತಿಗೆ ನಾವು ರಾಜೀನಾಮೆ ಕೊಡಿ ಅಂತ ಒತ್ತಾಯಿಸಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಎಫ್ ಐ ಆರ್ ಆಗಿದ್ದವರೆಲ್ಲೂ ರಾಜೀನಾಮೆ ಕೊಡಿ ಅಂತ ನಾನು ಕೇಳೊಲ್ಲ. ಇದೇ ಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡಲಿ ಎಂದು ನಾನು ಮೊದಲಿಂದಲೂ ಕೇಳಿಯೇ ಇಲ್ಲ. ನಾನು ರಾಜೀನಾಮೆ ಕೊಡಬೇಕಾದ ಸಂದರ್ಭಕ್ಕೆ ಕೊಡ್ತಿನಿ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News