ಬೆಂಗಳೂರು : ನಿರ್ದಿಷ್ಟ ಆದೇಶದ ಅನುಪಸ್ಥಿತಿಯಲ್ಲಿ ನ್ಯಾಯಾಲಯದ ಕಲಾಪಗಳ ಸಂಗ್ರಹ (ಆರ್ಕೈವ್) ಮಾಡಲಾದ ಆಡಿಯೊ-ವೀಡಿಯೊ ದಾಖಲೆಗಳ ಪ್ರತಿಗಳನ್ನು ಪಡೆಯಲು ಅರ್ಜಿದಾರರಿಗೆ ಸ್ವಯಂಚಾಲಿತ ಹಕ್ಕಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ನ್ಯಾಯಾಲಯದ ಮೇಲ್ಮನವಿ ವಿಚಾರಣೆಯ ಸಂಗ್ರಹ ಮಾಡಲಾದ ದಾಖಲೆಗಳ ಪ್ರತಿಗಳನ್ನು ನೀಡಲು ನಿರಾಕರಿಸಿದ ಹೈಕೋರ್ಟ್ ಆಡಳಿತ ವಿಭಾಗದ ನಿರ್ಧಾರ ಪ್ರಶ್ನಿಸಿ 72 ವರ್ಷದ ಎ. ಸತ್ಯನಾರಾಯಣ ಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ಇತ್ತೀಚೆಗೆ ವಜಾಗೊಳಿಸಿರುವ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.

ಕರ್ನಾಟಕ ನ್ಯಾಯಾಲಯಗಳ ಕಲಾಪಗಳ ನೇರ ಪ್ರಸಾರ ಮತ್ತು ರೆಕಾರ್ಡಿಂಗ್ ನಿಯಮಗಳು-2021ರ ನಿಯಮ 8 ಮತ್ತು 10ರ ಪ್ರಕಾರ ನ್ಯಾಯಾಲಯ ನಿರ್ದಿಷ್ಟ ಆದೇಶ ಹೊರಡಿಸದ ಹೊರತು ರೆಕಾರ್ಡಿಂಗ್ ದಾಖಲೆಗಳ ಪ್ರತಿಗಳನ್ನು ಕೋರುವ ಯಾವುದೇ ಹಕ್ಕನ್ನು ಅರ್ಜಿದಾರರಿಗೆ ಲಭ್ಯವಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಅರ್ಜಿದಾರರು ಪ್ರತಿಗಳನ್ನು ಕೋರಿ ಸಲ್ಲಿಸಿದ ಮನವಿಯನ್ನು ತಿರಸ್ಕರಿಸಿರುವುದನ್ನು ಅವರು ಪ್ರಶ್ನಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ ಅರ್ಜಿ ವಜಾಗೊಳಿಸಿ ಆದೇಶಿಸಿದೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor