ಬೆಂಗಳೂರು : ಜಪಾನ್‍ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್-2026ರ ವನಿತೆಯರ ವೀಲ್‍ಚೇರ್ ಬ್ಯಾಡ್ಮಿಂಟನ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದು, ಜಾಗತಿಕ ಕ್ರೀಡಾ ರಂಗದಲ್ಲಿ ಕರ್ನಾಟಕದ ಹಿರಿಮೆಯನ್ನು ಹೆಚ್ಚಿಸಿರುವ ಪಲ್ಲವಿ ಕಾಲುವೆಹಳ್ಳಿ ಮಂಜುನಾಥ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಗುರುವಾರ ಈ ಸಂಬಂಧ ಎಕ್ಸ್‌ ನಲ್ಲಿ ಪೋಸ್ಟ್ ಹಾಕಿರುವ ಅವರು, ದೈಹಿಕ ನ್ಯೂನತೆಗಳನ್ನು ಮೀರಿ ಸಾಧನೆಯ ಶಿಖರವೇರಬೇಕೆಂಬ ಅವರ ಅಚಲ ಸಂಕಲ್ಪ ಇಂದು ನಾಡಿಗೆ ಹೆಮ್ಮೆ ತಂದಿದೆ. ಕ್ರೀಡಾಪಟುಗಳ ಪ್ರತಿಭೆಗೆ ಸೂಕ್ತ ಪ್ರೋತ್ಸಾಹ ಮತ್ತು ಬೆಂಬಲ ನೀಡುವ ಮೂಲಕ ಅವರ ಕನಸುಗಳು ನನಸಾಗಲು ನೆರವಾಗಲು ನಮ್ಮ ಸರಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.

ಪಲ್ಲವಿ ಅವರ ಸಾಧನೆಯ ಪಯಣ ಇನ್ನಷ್ಟು ಯಶಸ್ಸಿನೊಂದಿಗೆ ಮುಂದುವರಿಯಲಿ, ಮುಂಬರುವ ಸ್ಪರ್ಧೆಗಳಲ್ಲಿ ಮತ್ತಷ್ಟು ಪದಕಗಳು ಅವರದಾಗಲಿ ಎಂದು ಪರಮೇಶ್ವರ್ ಹಾರೈಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor