×
Ad

ರಾಕ್‌ಲೈನ್ ಮಾಲ್ ಗೆ ಹಾಕಿದ್ದ ಬೀಗ ಮುದ್ರೆ ತೆರೆಯುವಂತೆ ಹೈಕೋರ್ಟ್ ಆದೇಶ

Update: 2024-02-19 18:06 IST

ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ರಾಕ್‌ಲೈನ್‌ ಮಾಲ್‌ಗೆ ಬಿಬಿಎಂಪಿ ಹಾಕಿರುವ ಬೀಗ ಮುದ್ರೆ ತೆರೆಯುವಂತೆ ಹೈಕೋರ್ಟ್‌ ಆದೇಶ ನೀಡಿದೆ.

ಮಾಲ್‌ಗೆ ಬಿಬಿಎಂಪಿ ಬೀಗ ಮುದ್ರೆ ಹಾಕಿದ್ದ ಕ್ರಮ ಪ್ರಶ್ನಿಸಿ ರಾಕ್‌ಲೈನ್‌ ಮಾಲ್‌ ಆಡಳಿತ ಮಂಡಳಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸುನಿಲ್ ದತ್ ಯಾದವ್ ನೇತೃತ್ವದ ಪೀಠ ಬೀಗ ಮುದ್ರೆ ತೆರವಿಗೆ ಸೂಚನೆ ನೀಡಿದೆ.  ವ್ಯಾಪಾರಕ್ಕೆ ಯಾವುದೇ ತೊಂದರೆಗಳನ್ನು ಮಾಡಬಾರದು. ತೆರಿಗೆ ಹಣದ ವಿಚಾರವಾಗಿ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿ ಎಂದು ಬಿಬಿಎಂಪಿಗೆ ಕೋರ್ಟ್‌ ಸೂಚಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News