×
Ad

ಬಿಜೆಪಿ ವಿರುದ್ಧ ಶಾಸಕ ರಿಜ್ವಾನ್ ಅರ್ಷದ್ ಸಲ್ಲಿಸಿದ್ದ ಮಾನಹಾನಿ ಕೇಸ್ ರದ್ದತಿಗೆ ಹೈಕೋರ್ಟ್ ನಕಾರ

Update: 2024-02-22 23:00 IST

ಬೆಂಗಳೂರು : ಬಿಜೆಪಿ ವಿರುದ್ಧ ಶಿವಾಜಿನಗರ ಕಾಂಗ್ರೆಸ್ ಶಾಸಕ ರಿಝ್ವಾನ್ ಅರ್ಷದ್ ದಾಖಲಿಸಿರುವ ಮಾನಹಾನಿ ಕೇಸ್ ರದ್ದತಿಗೆ ಹೈಕೋರ್ಟ್ ನಿರಾಕರಿಸಿದೆ.

ನಕಲಿ ವೋಟರ್ ಐಡಿ ಕುರಿತಂತೆ ಬಿಜೆಪಿ 2019ರಲ್ಲಿ ಟ್ವೀಟ್ ಮಾಡಿತ್ತು. ಇದರಿಂದ ಅಸಮಾಧಾನಕೊಂಡಿದ್ದ ಶಾಸಕ ರಿಝ್ವಾನ್ ಅರ್ಷದ್ ಬಿಜೆಪಿಯಿಂದ ಮಾನಹಾನಿಯಾಗಿದೆ ಎಂದು ದೂರು ದಾಖಲಿಸಿದ್ದರು.

ಇದನ್ನು ಪ್ರಶ್ನಿಸಿ ಅಂದಿನ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅರ್ಜಿ ಸಲ್ಲಿಸಿದ್ದರು. ಗುರುವಾರ ವಿಚಾರಣೆ ನಡೆಸಿದ ನ್ಯಾಯಾಲಯ, ರಿಝ್ವಾನ್ ಅರ್ಷದ್ ರಾಜಕೀಯ ಪಕ್ಷದ ವಿರುದ್ದ ಕೇಸ್ ಮುಂದುವರಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿ ಕೇಸ್ ರದ್ದುಪಡಿಸಲು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರಿದ್ದ ಪೀಠ ನಿರಾಕರಿಸಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News