ಸಾಂದರ್ಭಿಕ ಚಿತ್ರ

ಬೆಂಗಳೂರು : ನಗರದಾದ್ಯಂತ ತಡರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ ನಿಗದಿತ ಸಮಯಕ್ಕೆ ಮುಚ್ಚುವ ನಿಯಮ ಹಾಗೂ ಅಪ್ರಾಪ್ತರಿಗೆ ಮದ್ಯ ಪೂರೈಸುವುದರ ಮೇಲಿನ ನಿರ್ಬಂಧ ಪಾಲನೆಯ ಪರಿಶೀಲನೆಗಾಗಿ 500 ಪಬ್‌ಗಳು ಮತ್ತು ಬಾರ್‌ಗಳನ್ನು ಬೆಂಗಳೂರು ನಗರ ಪೊಲೀಸರು ತಪಾಸಣೆ ನಡೆಸಿದ್ದಾರೆ.

ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆ ಶನಿವಾರ ನಸುಕಿನ ಜಾವ 2 ಗಂಟೆಯವರೆಗೆ ಮುಂದುವರಿಯಿತು. ಇಬ್ಬರು ಜಂಟಿ ಪೊಲೀಸ್ ಆಯುಕ್ತರು ಸೇರಿದಂತೆ 19 ಐಪಿಎಸ್ ಅಧಿಕಾರಿಗಳು, ಆಯಾ ವ್ಯಾಪ್ತಿಯ ಪೊಲೀಸ್ ತಂಡಗಳು ಹಾಗೂ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಬ್ರಿಗೇಡ್ ರಸ್ತೆಯಲ್ಲಿರುವ ಬ್ರಿಗೇಡ್ ಗಾರ್ಡನ್ ಮತ್ತು ಪೇಜ್ 3 ಸೇರಿದಂತೆ ಹಲವು ಸಂಸ್ಥೆಗಳಲ್ಲಿ ತಪಾಸಣೆ ನಡೆಸಲಾಯಿತು. ಕೋರಮಂಗಲ, ಆನಂದ್ ರಾವ್ ವೃತ್ತದ ಸುತ್ತಮುತ್ತಲಿನ ಪ್ರದೇಶಗಳು ಸೇರಿದಂತೆ ನಗರದ ವಿವಿಧೆಡೆ ಪೊಲೀಸರು ಪರಿಶೀಲನೆ ಕೈಗೊಂಡರು.

ದಾಳಿ ಸಂದರ್ಭದಲ್ಲಿ 292 -ಪಿಟಿ ಕೇಸ್, 355 ಕೋಟ್ಪಾ ಪ್ರಕರಣಗಳು, ಮೂರು ಪ್ರಕರಣಗಳು ಹಾಗೂ ಒಂದು ಕೆಪಿ ಆಕ್ಟ್ ಪ್ರಕರಣವನ್ನು ನಗರ ಪೊಲೀಸರು ದಾಖಲಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor