ಫಿಲ್ಮ್ ಚೇಂಬರ್ ಅಧ್ಯಕ್ಷೆಯಾಗಿ ಜಯಮಾಲಾ ಆಯ್ಕೆ
Update: 2026-02-01 00:58 IST
ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಇಂದು ಚುನಾವಣೆ ನಡೆದಿದ್ದು, ನಟಿ ಜಯಮಾಲ ಗೆಲುವು ಸಾಧಿಸಿದ್ದಾರೆ.
ಗುರುರಾಜ ಕಲ್ಯಾಣ ಮಂಟಪದಲ್ಲಿ ಈ ಚುನಾವಣೆ ನಡೆಯಿತು. ಈ ಭಾರಿಯ ಫಿಲ್ಮ್ ಚೇಂಬರ್ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ನಟಿ ಜಯಮಾಲಾ ಹಾಗೂ ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ಭಾ.ಮಾ. ಹರೀಶ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ 512 ಮತ ಪಡೆದು ಜಯಮಾಲಾ ಜಯಗಳಿಸಿದ್ದಾರೆ.