ವಿಧಾನ ಪರಿಷತ್ | ಸಣ್ಣ ಸಮುದಾಯಗಳಿಗೆ ಅವಕಾಶ ಕಲ್ಪಿಸಲು ಮನವಿ : ಕೆ.ಎನ್.ರಾಜಣ್ಣ
Update: 2025-02-02 22:16 IST
ಬೆಂಗಳೂರು : ವಿಧಾನ ಪರಿಷತ್‍ಗೆ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಫೆ.10ರೊಳಗೆ ಹೊಸದಿಲ್ಲಿಗೆ ಹೋಗುತ್ತೇನೆ. ಸಣ್ಣ (ಮೈಕ್ರೋ) ಸಮುದಾಯಗಳಿಗೆ ಅವಕಾಶ ಕೊಡಬೇಕೆಂದು ಹೈಕಮಾಂಡ್‍ಗೆ ಮನವಿ ಮಾಡಲಿದ್ದೇನೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಷತ್‍ಗೆ ಬುದ್ಧಿವಂತರನ್ನು ಆಯ್ಕೆ ಮಾಡಬೇಕು. ಪ್ರತಿನಿಧಿಸಲ್ಪಡದ ಸಮುದಾಯದವರಿಗೆ ಅವಕಾಶ ನೀಡಬೇಕು. ಮೇಲ್ಮನೆಗೆ ಸಣ್ಣ ಸಣ್ಣ ಸಮುದಾಯಗಳಿಂದ ನೇಮಕ ಮಾಡಿ ಎಂದು ಹೈಕಮಾಂಡ್ ನಾಯಕರಿಗೆ ಕೋರಲಿದ್ದೇನೆ ಎಂದರು.
ಕಾಂಗ್ರೆಸ್ ಸಮಾವೇಶ ವಿಚಾರವಾಗಿ ಪ್ರತಿಕ್ರಿಯಿಸಿದ ಕೆ.ಎನ್.ರಾಜಣ್ಣ, ಕಾಂಗ್ರೆಸ್ ನೇತೃತ್ವದಲ್ಲೇ ಸಮಾವೇಶ ಮಾಡುತ್ತೇವೆ. ಸತೀಶ್ ಜಾರಕಿಹೊಳಿ ಸಮಾವೇಶ ಅಂತ ಅಲ್ಲ. ಎಸ್ಸಿ, ಎಸ್ಟಿಯವರೂ ಇರುತ್ತಾರೆ, ಮುಂದುವರಿದವರೂ ಇರುತ್ತಾರೆ. ಇನ್ನೂ ರೂಪುರೇಷೆ ಮಾಡಿಲ್ಲ. ಮುಂದೆ ಚುನಾವಣೆಗಳು ಬರುತ್ತದೆ. ಅದಕ್ಕೆ ನಾವು ಸಿದ್ಧರಾಗಬೇಕಲ್ಲ? ಎಂದರು.