ಕೆಪಿಸಿಸಿ ಮಾಧ್ಯಮ ವಿಭಾಗದ ಜಿಲ್ಲಾ ಉಸ್ತುವಾರಿ ನೇಮಕ
ಬೆಂಗಳೂರು : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ(ಕೆಪಿಸಿಸಿ) ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸೂಚನೆಯಂತೆ ಕೆಪಿಸಿಸಿ ಮಾಧ್ಯಮ ವಿಭಾಗದ ಜಿಲ್ಲಾ ಉಸ್ತುವಾರಿಗಳನ್ನು ನೇಮಕ ಮಾಡಿ, ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಆದೇಶ ಹೊರಡಿಸಿದ್ದಾರೆ.
ಬೆಂಗಳೂರು ನಗರಕ್ಕೆ ರಮೇಶ್ ಬಾಬು ಹಾಗೂ ಐಶ್ವರ್ಯ ಮಹಾದೇವ್, ಬೆಂಗಳೂರು ಗ್ರಾಮಾಂತರಕ್ಕೆ ನಾಯ್ಡ ಬಿ.ಆರ್., ಚಿಕ್ಕಬಳ್ಳಾಪುರಕ್ಕೆ ದಯಾನಂದ್, ಚಿತ್ರದುರ್ಗ ದಿವಾಕರ್ ಎನ್., ದಾವಣಗೆರೆ ಸ್ವಾತಿ ಚಂದ್ರಶೇಖರ್, ಕೋಲಾರ ನಾರಾಯಣಸ್ವಾಮಿ ಎಂ, ರಾಮನಗರ ಎಂ.ಜಿ. ಸುಧೀಂದ್ರ, ತುಮಕೂರು ದರ್ಶನ್ ಡಿ, ಶಿವಮೊಗ್ಗ ಜಿಲ್ಲೆಗೆ ಎಚ್.ಬಿ. ಚಂದ್‍ಪಾಷಾ ಅವರನ್ನು ಕೆಪಿಸಿಸಿ ಮಾಧ್ಯಮ ವಿಭಾಗದ ಜಿಲ್ಲಾ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ.
ಚಾಮರಾಜನಗರ ಜಿಲ್ಲೆಗೆ ವೆಂಕಟೇಶ್, ಚಿಕ್ಕಮಗಳೂರು ಸೂರ್ಯ ಮುಕುಂದ್‍ರಾಜ್, ದಕ್ಷಿಣ ಕನ್ನಡ ಬಿ. ಥಾಮಸ್, ಹಾಸನ ಭವ್ಯ ನರಸಿಂಹಮೂರ್ತಿ, ಕೊಡಗು ಎಂ.ಜಿ. ಹೆಗ್ಡೆ, ಮೈಸೂರು ನಗರ ತೇಜಸ್ವಿನಿ ಗೌಡ, ಮೈಸೂರು ಗ್ರಾಮಾಂತರ ಮಂಜುನಾಥ್ ಅದ್ದೆ, ಮಂಡ್ಯ ಜಿ.ಸಿ. ರಾಜು, ಉಡುಪಿ ಜಿಲ್ಲೆಗೆ ರವೀಶ್ ಬಸಪ್ಪ ಅವರನ್ನು ನೇಮಕ ಮಾಡಲಾಗಿದೆ.
ಬಾಗಲಕೋಟೆ ಜಿಲ್ಲೆಗೆ ನಾಗರಾಜ್ ಯಾದವ್, ಚಿಕ್ಕೋಡಿ ಮಹಾಂತೇಶ್ ಹಟ್ಟಿ, ಬೆಳಗಾವಿ ಶೈಲಜಾ ಅಮರನಾಥ್, ಬೆಳಗಾವಿ ನಗರಕ್ಕೆ ಲಾವಣ್ಯ ಬಲ್ಲಾಳ್, ವಿಜಯಪುರ ಪದ್ಮಪ್ರಸಾದ್ ಜೈನ್, ಧಾರವಾಡ ಗ್ರಾಮಾಂತರ ಜಸವರಾಜ್, ಗದಗ ಧ್ರುವ ಜತ್ತಿ, ಹಾವೇರಿ ಶೈಲಜಾ ಪಾಟೀಲ್, ಹುಬ್ಬಳ್ಳಿ-ಧಾರವಾಡ ನಗರ ಡಾ. ಶಂಕರ್ ಗುಹಾ, ಉತ್ತರ ಕನ್ನಡ ಜಿಲ್ಲೆಗೆ ರಮೇಶ್ ಹೆಗ್ಡೆ ಮಾಧ್ಯಮ ವಿಭಾಗದ ಜಿಲ್ಲಾ ಉಸ್ತುವಾರಿಗಳನ್ನು ನೇಮಕವಾಗಿದ್ದಾರೆ.
ಬಳ್ಳಾರಿ ಗ್ರಾಮಾಂತರ ಬಾಲಕೃಷ್ಣ ಯಾದವ್, ಬಳ್ಳಾರಿ ನಗರ ಕಶ್ಯಪ್ ನಂದನ್, ವಿಜಯನಗರ ಸತ್ಯ ಪ್ರಕಾಶ್, ಬೀದರ್ ವಿನಯ್ ರಾಜ್, ಕಲಬುರಗಿ ಆಯಿಷಾ ಫರ್ಝಾನಾ, ಕೊಪ್ಪಳ ಎಸ್.ಎ. ಹುಸೈನ್, ರಾಯಚೂರು ಇರ್ಷಾದ್ ಅಹ್ಮದ್, ಯಾದಗಿರಿ ವಿಠಲ್ ಶೆಟ್ಟಿ ಅವರನ್ನು ಕೆಪಿಸಿಸಿ ಮಾಧ್ಯಮ ವಿಭಾಗದ ಜಿಲ್ಲಾ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ.