ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವೆಯಾಗಿ ಕೆ.ಟಿ.ಶಾಂತಲ ಅಧಿಕಾರ ಸ್ವೀಕಾರ
Update: 2025-07-31 13:41 IST
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾನಿಲಯದ ನೂತನ ಕುಲಸಚಿವರಾಗಿ ಕೆ.ಟಿ.ಶಾಂತಲ ಅಧಿಕಾರ ಸ್ವೀಕರಿಸಿದರು.
ಹಾಸನ ಜಿಲ್ಲೆ ಅಪರ ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾ ದಂಡಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಕೆ.ಟಿ.ಶಾಂತಲರನ್ನು ಬೆಂಗಳೂರು ವಿವಿ ಕುಲಸಚಿವರಾಗಿ ನೇಮಕಗೊಳಿಸಿ ಸರಕಾರ ಆದೇಶ ಹೊರಡಿಸಿದೆ.
ಹಾಲಿ ಕುಲಸಚಿವ ಶೇಕ್ ಲತೀಫ್ ಅಧಿಕಾರ ಹಸ್ತಾಂತರಿಸಿ ಶುಭ ಕೋರಿದರು. ಈ ಸಂದರ್ಭದಲ್ಲಿ ಬೆಂಗಳೂರು ವಿವಿ ಕುಲಪತಿ ಡಾ.ಜಯಕರ ಎಸ್.ಎಂ ಮತ್ತು ಅಧಿಕಾರಿಗಳು, ಉಪನ್ಯಾಸಕರು ಉಪಸ್ಥಿತರಿದ್ದರು.