ಲೋಕಸಭಾ ಚುನಾವಣೆ | ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಈ ಬಾರಿಯೂ ತಗ್ಗಿದ ಮತದಾನ..!

Update: 2024-04-26 17:34 GMT

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನ ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಶೇ.52.81ರಷ್ಟು ಮತದಾನವಾಗಿದ್ದು, ಈ ಮೂಲಕ ಬೆಂಗಳೂರು ಕೇಂದ್ರ ಕ್ಷೇತ್ರವು ಈ ಬಾರಿಯೂ ಕಡಿಮೆ ಮತದಾನ ಕ್ಷೇತ್ರವಾಗಿಯೇ ಮುಂದುವರೆದಿದೆ.

ಈ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಸಿವಿರಾಮನ್ ನಗರದಲ್ಲಿ ಶೇ.48.30, ಚಾಮರಾಜಪೇಟೆ ಶೇ.47.09, ಗಾಂಧಿನಗರ ಶೇ.53.48, ಮಹದೇವಪುರ ಶೇ.50.01, ರಾಜಾಜಿನಗರ ಶೇ.51.11, ಸರ್ವಜ್ಞ ನಗರ ಶೇ.46.25, ಶಾಂತಿನಗರ ಶೇ.53.02, ಶಿವಾಜಿನಗರ ಶೇ.51.29ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

ಬಿಸಿಲಿಗೆ ಮತಗಟ್ಟೆಯಿಂದ ದೂರ: ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಬೇಸಿಗೆ ಬಿಸಿಲು ಕಡಿಮೆ ಇದ್ದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸಿ ಮತ ಚಲಾವಣೆ ಮಾಡಿದ್ದರು. ಬೆಳಗ್ಗೆ 10 ಗಂಟೆಗೆ ಶೇ.20ರಷ್ಟು ಮತದಾನ ರಾಜ್ಯದಲ್ಲಾಗಿತ್ತು. ಬಿಸಿಲು ಹೆಚ್ಚಾದಂತೆ ಜನ ಮತಗಟ್ಟೆಯಿಂದ ದೂರ ಉಳಿದರು.

ಸಂಜೆ ಹೆಚ್ಚಿದ ಮತದಾರರು: ಬಿಸಿಲು ತಗ್ಗಿದ ಹಿನ್ನೆಲೆಯಲ್ಲಿ ಸಂಜೆ 4 ಗಂಟೆಯ ಬಳಿಕ ಮತದಾರರ ಸಂಖ್ಯೆ ಹೆಚ್ಚಳವಾಗಿದೆ. ಕೊನೆಯ ಕ್ಷಣದಲ್ಲಿ ಮತ ಚಲಾವಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಸಂಜೆ 6ಕ್ಕೆ ಮತಗಟ್ಟೆಗಳು ಬಂದ್ ಆಗಲಿದ್ದು, ನಿಗದಿತ ಮತದಾರರಿಗೆ ಅವಕಾಶ ನೀಡಿ ಆ ಬಳಿಕ ಮತದಾನ ಪ್ರತಿಕ್ರಿಯೆ ಕೊನೆಗೊಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News