×
Ad

ಬಿಬಿಎಂಪಿ ನೌಕರರ ಹಾಜರಾತಿ ಖಾಸಗಿ ಸಂಸ್ಥೆಗೆ : ಲೋಕಾಯುಕ್ತಕ್ಕೆ ದೂರು

Update: 2025-02-25 21:14 IST

ಬೆಂಗಳೂರು : ಚಾಲ್ತಿಯಲ್ಲಿದ್ದ ಬಯೋಮೆಟ್ರಿಕ್ ಹಾಜರಾತಿಯನ್ನು ಖಾಸಗಿ ಆಪ್‍ಗೆ ವರ್ಗಾಯಿಸುವ ಮೂಲಕ ಸಾರ್ವಜನಿಕರು ಕಟ್ಟುವ ತೆರಿಗೆ ಹಣದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿದ್ದು, ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ನೈಜ ಹೋರಾಟಗಾರರ ವೇದಿಕೆ ಒತ್ತಾಯಿಸಿದೆ.

ಮಂಗಳವಾರ ವೇದಿಕೆಯ ಸಂಚಾಲಕ ಎಚ್.ಎಂ. ವೆಂಕಟೇಶ್ ಲೋಕಾಯುಕ್ತರಿಗೆ ದೂರು ನೀಡಿದ್ದು, ಬಿಬಿಎಂಪಿ ನೌಕರರಿಗೆ ಖಾಸಗಿ ಆಪ್ ಮೂಲಕ ಹಾಜರಾತಿ ಕಡ್ಡಾಯ ಮಾಡಿ, ಇದನ್ನು ಆಧಾರಿಸಿ ಸಂಬಳ ನೀಡಲಾಗುತ್ತಿದೆ. ಈ ಮೂಲಕ ಅವ್ಯವಹಾರ ನಡೆಸಲಾಗಿದೆ ಎಂದು ಹೇಳಿದ್ದಾರೆ.

ಸರಕಾರದ ಅನುಮೋದನೆ ಪಡೆಯದೆ, ಟೆಂಡರ್ ಕರೆಯದೆ ಖಾಸಗಿ ಸಂಸ್ಥೆಗೆ ಸರಕಾರಿ ನೌಕರರ ಹಾಜರಾತಿ ನಿರ್ವಹಣೆಯನ್ನು ನೀಡಲಾಗಿದೆ. ಸಂಬಳ ಕಡಿತ ಮಾಡುವುದನ್ನು ಮೇಲಾಧಿಕಾರಿ ಕ್ರಮ ಜರುಗಿಸಬೇಕು, ಆದರೆ ಖಾಸಗಿಯವರು ದತ್ತಾಂಶದ ಆಧಾರಗಳಲ್ಲಿ ಹಾಜರಾತಿ ನಿರ್ಧರಿಸುತ್ತಿದ್ದು, ಇದು ಕಾನೂನುಬಾಹಿರವಾಗಿರುತ್ತದೆ ಎಂದು ಅವರು ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News