×
Ad

ಬೆಂಗಳೂರು | ಲಂಚ ಸ್ವೀಕಾರ ಆರೋಪ : ಮಹಿಳಾ ಸಬ್ ಇನ್‍ಸ್ಪೆಕ್ಟರ್ ಲೋಕಾಯುಕ್ತರ ವಶಕ್ಕೆ

Update: 2025-07-22 18:37 IST

ಬೆಂಗಳೂರು : ಪ್ರಕರಣವೊಂದರಲ್ಲಿ ಬಿ ರಿಪೋರ್ಟ್ ಸಲ್ಲಿಸಲು ಆರೋಪಿಯಿಂದ ಸುಮಾರು 1.25 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ಆರೋಪದಡಿ ಮಹಿಳಾ ಪೊಲೀಸ್ ಸಬ್ ಇನ್‍ಸ್ಪೆಕ್ಟರ್‌ವೊಬ್ಬರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ.

ಗೋವಿಂದಪುರ ಠಾಣೆಯ ಪಿಎಸ್ಸೈ ಸಾವಿತ್ರಿ ಬಾಯಿ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ ಎಂದು ಗುರುತಿಸಲಾಗಿದೆ. ಜು.21ರ ಸೋಮವಾರ ಮುಹಮ್ಮದ್ ಯೂನುಸ್ ಎಂಬಾತನಿಂದ ಸುಮಾರು 1.25 ಲಕ್ಷ ರೂ. ಸ್ವೀಕರಿಸುತ್ತಿದ್ದಾಗಲೇ ಸಾವಿತ್ರಿ ಬಾಯಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಲಾಗಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.

ಪ್ರಕರಣದ ಹಿನ್ನೆಲೆ: ವಿವಾಹವಾಗಿರುವುದನ್ನು ಮುಚ್ಚಿಟ್ಟು ಲೀವ್ ಇನ್ ರಿಲೇಶನ್‍ಶಿಪ್‍ನಲ್ಲಿದ್ದ ಮುಹಮ್ಮದ್ ಯೂನುಸ್‍ನನ್ನು ಪ್ರಶ್ನಿಸಿದಾಗ ತನ್ನ ಮೇಲೆ ಹಲ್ಲೆಗೈದಿರುವುದಾಗಿ ಯುವತಿಯೊಬ್ಬರು ಗೋವಿಂದಪುರ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ತನಿಖೆಯನ್ನು ವಹಿಸಿಕೊಂಡಿದ್ದ ಸಾವಿತ್ರಿ ಬಾಯಿ ಅವರು ಬಿ ರಿಪೋರ್ಟ್ ಸಲ್ಲಿಸಲು 1.25 ಲಕ್ಷ ರೂ. ನೀಡುವಂತೆ ಯೂನುಸ್ ಬಳಿ ಬೇಡಿಕೆಯಿಟ್ಟಿದ್ದರು. ಅದರಂತೆ, ಯೂನುಸ್ ನೀಡಿದ್ದ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ಟ್ರ್ಯಾಪ್ ಕಾರ್ಯಾಚರಣೆ ಕೈಗೊಂಡಿದ್ದರು ಎಂದು ಲೋಕಾಯುಕ್ತ ಪೊಲೀಸ್ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News