×
Ad

ಬೆಂಗಳೂರು: ವಿದ್ಯಾರ್ಥಿನಿಗಳ ಕೌಶಲ್ಯ ಅಭಿವೃದ್ಧಿಗಾಗಿ ʼಮ್ಯಾಚ್ ಡೇʼ ಕಾರ್ಯಕ್ರಮ

Update: 2024-03-03 23:24 IST

ಬೆಂಗಳೂರು: ಲಾಭರಹಿತ ಟ್ರಸ್ಟ್ ಆಗಿರುವ ʼಗೋಯಿಂಗ್ ಟು ಸ್ಕೂಲ್ʼ, ಕರ್ನಾಟಕ ಸರ್ಕಾರ ಮತ್ತು ಬಿಟಿ ಗ್ರೂಪ್ ಸಹಭಾಗಿತ್ವದಲ್ಲಿ ನಮ್ಮ ಕಾಲದ ಅತಿದೊಡ್ಡ ಸವಾಲಾದ ಹವಾಮಾನ ಬದಲಾವಣೆ ಸಮಸ್ಯೆಯನ್ನು ಪರಿಹರಿಸುವ ಮತ್ತು ಜೀವನದಲ್ಲಿ ಯಶಸ್ಸು ಸಾಧಿಸಲು ನೆರವಾಗುವ ಉದ್ದೇಶದಿಂದ ಹೆಣ್ಣು ಮಕ್ಕಳಿಗೆ ಡಿಜಿಟಲ್, ಜೀವನ ಕೌಶಲ್ಯ ಮತ್ತು ಆಟದ ಕೌಶಲ್ಯ ಒದಗಿಸುವ ಕಾರ್ಯಕ್ರಮ ಆರಂಭಿಸಿದೆ. ಆ ನಿಟ್ಟಿನಲ್ಲಿ ಕ್ರೀಡಾ ಶಕ್ತಿಯನ್ನು ಸಂಭ್ರಮಿಸಲು 'ಮ್ಯಾಚ್ ಡೇ 2024' ಅನ್ನು ಆಯೋಜಿಸಿದೆ.

ʼಗೋಯಿಂಗ್ ಟು ಸ್ಕೂಲ್ʼ ಬಾಲಕಿಯರ ಹೊರಾಂಗಣ ಶಾಲೆ, ಸರ್ಕಾರಿ ಶಾಲೆಗಳಲ್ಲಿ ಬಾಲಕಿಯರಿಗಾಗಿ ಕ್ರೀಡಾ ಶೈಕ್ಷಣಿಕ ಕೌಶಲ್ಯ ಕಾರ್ಯಕ್ರಮವನ್ನು ನಡೆಸಲು ಕರ್ನಾಟಕ ಸರ್ಕಾರದೊಂದಿಗೆ ತಿಳುವಳಿಕೆ ಪತ್ರಕ್ಕೆ (ಎಂಓಯು) ಸಹಿ ಹಾಕಿದೆ.

ಟಿವಿ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲಿರುವ 11 ಮಂದಿ ಹೆಣ್ಣು ಮಕ್ಕಳ ಜೊತೆಗಿನ ಸಂವಾದ ನಡೆಯಿತು. ಆಟದ ಶಕ್ತಿಯಿಂದ ಹಿಡಿದು ಕೌಶಲ್ಯಗಳ ಕಲಿಯುವಿಕೆ ಮತ್ತು ಭಾರತದಲ್ಲಿ ಫುಟ್ ಬಾಲ್ ಆಡಲು ಹುಡುಗಿಯರನ್ನು ಹೇಗೆ ಸಿದ್ಧಗೊಳಿಸುವುದು, ಹವಾಮಾನ ಬದಲಾವಣೆಗೆ ಪರಿಹಾರ ಕಂಡುಕೊಳ್ಳುವ ಡಿಜಿಟಲ್ ಕೌಶಲ್ಯಗಳನ್ನು ಹೇಗೆ ಕಲಿಯುವುದು ಎಂಬುದರ ಕುರಿತ ಚರ್ಚೆ ನಡೆಯಿತು.

ಕಾರ್ಯಕ್ರಮದಲ್ಲಿ ಗೋಯಿಂಗ್ ಟು ಸ್ಕೂಲ್, ಬಿಟಿ ಗ್ರೂಪ್ ಪ್ರತಿನಿಧಿಗಳು, ಸರ್ಕಾರಿ ಶಾಲೆಗಳ ಪ್ರಾಂಶುಪಾಲರು ಮತ್ತು ನಗರದ 500ಕ್ಕೂ ಹೆಚ್ಚು ಬಾಲಕಿಯರು ಉಪಸ್ಥಿತರಿದ್ದರು. ಹೆಚ್ಚುವರಿಯಾಗಿ, ಬೆಂಗಳೂರು ಎಫ್‌ಸಿ ಮುಖ್ಯ ಕೋಚ್ ಜೆರಾರ್ಡ್ ಜರಗೋಜಾ, ಸಹಾಯಕ ಕೋಚ್ ಮತ್ತು ಮಾಜಿ ಇಂಡಿಯಾ ಇಂಟರ್‌ನ್ಯಾಶನಲ್ ಶ್ರೀ ರೆನೆಡಿ ಸಿಂಗ್, ತಂಡದ ಆಟಗಾರರಾದ ಅಲೆಕ್ಸಾಂಡರ್ ಜೊವಾನೊವಿಕ್, ನಮ್ಗ್ಯಾಲ್ ಭುಟಿಯಾ, ಆಶಿಶ್ ಝಾ, ಫುಟ್‌ಬಾಲ್ ನಿರ್ದೇಶಕ ಶ್ರೀ ಡಾರೆನ್ ಕ್ಲೇಡೈರಾ ಮತ್ತು ಬೆಂಗಳೂರು ಎಫ್‌ಸಿಯ ಅಂಡರ್ 15 ಮಹಿಳಾ ತಂಡದ ಹುಡುಗಿಯರು ಭಾಗವಹಿಸಿದ್ದರು.








 


 


 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News