×
Ad

ನಮ್ಮ ಮೆಟ್ರೋದಿಂದ 'ಮೊಬೈಲ್ ಕ್ಯೂಆರ್ ಗ್ರೂಪ್ ಟಿಕೆಟ್‌' ಪರಿಚಯ

Update: 2023-11-11 20:37 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ನ.11: ನಮ್ಮ ಮೆಟ್ರೋ ರೈಲುಗಳಲ್ಲಿ ಮೊಬೈಲ್ ಕ್ಯೂಆರ್ ಟಿಕೆಟ್‍ಗಳನ್ನು ಮೊಬೈಲ್ ಅಪ್ಲಿಕೇಶನ್‍ಗಳ ಮೂಲಕ ಒಬ್ಬ ಪ್ರಯಾಣಿಕನಿಗೆ ಒಂದು ಪ್ರಯಾಣಕ್ಕೆ ನೀಡಲಾಗುತ್ತಿದ್ದು, ನ.16ರಿಂದ ಒಮ್ಮೆ ಆರು ಜನರ ಗುಂಪು ಪ್ರಯಾಣ ಮಾಡಲು ಅನುಕೂಲವಾಗುವಂತೆ ಗ್ರೂಪ್ ಟಿಕೆಟ್‍ಗಳನ್ನು ಪರಿಚಯಿಸಲಾಗುತ್ತಿದೆ.

ಮೊಬೈಲ್ ಕ್ಯೂಆರ್ ಟಿಕೆಟ್‍ಗಳು ಟೋಕನ್ ದರಕ್ಕಿಂತ ಶೇ.5ರಷ್ಟು ರಿಯಾಯಿತಿ ದರವನ್ನು ಹೊಂದಿದೆ. ಕ್ಯೂಆರ್ ಗ್ರೂಪ್ ಟಿಕೆಟ್ ಸೌಲಭ್ಯವನ್ನು ಬಳಸುವ ಪ್ರಯಾಣಿಕರು, ಪ್ರಯಾಣಿಕರ ಸಂಖ್ಯೆ ಎನ್‍ಕ್ರಿಫ್ಟ್ ಮಾಡಿದ ಒಂದು ಕ್ಯೂಆರ್ ಟಿಕೇಟ್ ಅನ್ನು ಸ್ವೀಕರಿಸುತ್ತಾರೆ. ಈ ರೀತಿ ಸ್ವೀಕರಿಸಿದ ಟಿಕೆಟ್‍ಅನ್ನು ಗುಂಪಿನ ಪ್ರತಿ ಪ್ರಯಾಣಿಕರು ಪ್ರವೇಶ ಮತ್ತು ನಿರ್ಗಮನ ವೇಳೆ ಗೇಟ್‍ಗಳಲ್ಲಿ ಸ್ಕ್ಯಾನ್ ಮಾಡಬೇಕು ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News