×
Ad

‘ಮೈಕ್ರೋ ಫೈನಾನ್ಸ್’ ಸುಗ್ರೀವಾಜ್ಞೆ : ಸ್ಪಷ್ಟಣೆಗಳೊಂದಿಗೆ ಮತ್ತೊಮ್ಮೆ ರಾಜ್ಯಪಾಲರಿಗೆ ರವಾನಿಸಿದ ಸರಕಾರ

Update: 2025-02-10 19:53 IST

ಬೆಂಗಳೂರು : ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸಾರ್ವಜನಿಕರಿಗೆ ಸಾಲ ವಸೂಲಿ ನೆಪದಲ್ಲಿ ನೀಡುತ್ತಿರುವ ಕಿರುಕುಳ ತಪ್ಪಿಸಲು ರಾಜ್ಯ ಸರಕಾರ ಜಾರಿಗೆ ತರಲು ಉದ್ದೇಶಿಸಿದ್ದ ‘ಸುಗ್ರೀವಾಜ್ಞೆ’ಯ ಕುರಿತು ಸಮಗ್ರ ವಿವರಣೆಗಳೊಂದಿಗೆ ಕರಡನ್ನು ಮತ್ತೊಮ್ಮೆ ರಾಜ್ಯಪಾಲರಿಗೆ ರವಾನಿಸಲಾಗಿದೆ.

ಸೋಮವಾರ ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಚಿವಾಲಯ ಸ್ಪಷ್ಟಣೆ ನೀಡಿದ್ದು, ಉದ್ದೇಶಿತ ಸುಗ್ರೀವಾಜ್ಞೆಯಲ್ಲಿ ಯಾವುದೇ ಬದಲಾವಣೆ ಮಾಡದೆಯೇ ರಾಜ್ಯಪಾಲರು ಕೋರಿದ್ದ ಸ್ಪಷ್ಟಣೆಗಳಿಗೆ ಅಗತ್ಯ ವಿವರಣೆಗಳನ್ನು ನೀಡಿ ಕರಡನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಅಂಕಿತಕ್ಕಾಗಿ ಸರಕಾರ ರವಾನಿಸಿದೆ ಎಂದು ಗೊತ್ತಾಗಿದೆ.

ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸಾಲ ವಸೂಲಿಗಾಗಿ ಸಾರ್ವಜನಿಕರಿಗೆ ಅನಗತ್ಯ ಕಿರುಕುಳ, ಅಮಾನವೀಯ ಕ್ರಮ, ಆಸ್ತಿಪಾಸ್ತಿ ಮುಟ್ಟುಗೋಲು ಸೇರಿದಂತೆ ಬಡವರ ಮೇಲೆ ಒತ್ತಡ ಹೇರುತ್ತಿರುವ ಬಗ್ಗೆ ರಾಜ್ಯಪಾಲರಿಗೆ ವಿವರಣೆ ನೀಡಿದೆ. ಅಲ್ಲದೆ, ಸಾಲದ ಪ್ರಮಾಣ ಆಧರಿಸಿ ದಂಡದ ಮೊತ್ತ ನಿಗದಿ ಮಾಡಿಲ್ಲ. ಹೀಗಾಗಿ ಸುಗ್ರೀವಾಜ್ಞೆಗೆ ಅನುಮೋದನೆ ನೀಡಬೇಕೆಂದು ಸರಕಾರ ಕೋರಿದೆ ಎಂದು ತಿಳಿದುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News