×
Ad

ಮೆಟ್ರೋ ರೈಲಿನಲ್ಲಿ ಒಂದೇ ದಿನ 9 ಲಕ್ಷಕ್ಕೂ ಅಧಿಕ ಮಂದಿ ಪ್ರಯಾಣ

Update: 2024-12-07 20:37 IST

ಸಾಂದರ್ಭಿಕ ಚಿತ್ರ

ಬೆಂಗಳೂರು : ನಮ್ಮ ಮೆಟ್ರೋ ರೈಲಿನಲ್ಲಿ ಶುಕ್ರವಾರ(ಡಿ.6) ಒಂದೇ ದಿನ ಬರೋಬ್ಬರಿ 9,20,562 ಲಕ್ಷಕ್ಕೂ ಅಧಿಕ ಮಂದಿ ಸಂಚಾರ ಮಾಡಿದ್ದಾರೆ. ಇದು ಈವರೆಗಿನ ಅತಿಹೆಚ್ಚು ಪ್ರಯಾಣಿಕರು ಓಡಾಟ ಮಾಡಿದ ಸಂಖ್ಯೆಯಾಗಿದೆ ಎಂದು ನಮ್ಮ ಮೆಟ್ರೋ ತಿಳಿಸಿದೆ.

ಶನಿವಾರದಂದು ಈ ಬಗ್ಗೆ ಎಕ್ಸ್‌ನಲ್ಲಿ ಬಿಎಂಆರ್‍ಸಿಎಲ್ ಮಾಹಿತಿ ಹಂಚಿಕೊಂಡಿದ್ದು, ನೇರಳೆ ಮಾರ್ಗದಲ್ಲಿ 4,39,616 ಜನ ಪ್ರಯಾಣಿಸಿದ್ದು, ಹಸಿರು ಮಾರ್ಗದಲ್ಲಿ 3,12,248 ಜನ ಪ್ರಯಾಣಿಸಿದ್ದಾರೆ. ಕೆಂಪೇಗೌಡ ನಿಲ್ದಾಣದಿಂದ ಮಾರ್ಗ ಬದಲಿಸುವ ಮೂಲಕ 1,67,617 ಜನ ಪ್ರಯಾಣಿಸಿದ್ದಾರೆ ಎಂದಿದೆ.

ಇದೇ ಆಗಸ್ಟ್ 14ರಂದು ನಮ್ಮ ಮೆಟ್ರೋದಲ್ಲಿ ಒಂದೇ ದಿನ ಬರೋಬ್ಬರಿ 9.17 ಲಕ್ಷ ಮಂದಿ ಸಂಚರಿಸುವ ಮೂಲಕ ದಾಖಲೆ ಸೃಷ್ಟಿಸಿತ್ತು. ಇದೀಗ ನಮ್ಮ ಮೆಟ್ರೋದಲ್ಲಿ 9.20 ಲಕ್ಷಕ್ಕೂ ಅಧಿಕ ಜನ ಪ್ರಯಾಣಿಸುವ ದಾಖಲೆಯನ್ನು ಮುರಿದಿದೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News